Thursday, 5 August 2021

ಏಕಿಷ್ಟು ಕರುಣವೊ ಶ್ರೀಕೃಷ್ಣದೇವ ankita jayesha vittala

     ..

ಏಕಿಷ್ಟು ಕರುಣವೊ ಶ್ರೀಕೃಷ್ಣದೇವ ಪ


ನಾಲ್ಕ್ಹತ್ತು ಲೋಕದಲಿ ಸುಖ ಸೂರೆ ಮಾಳ್ಪೊ ಹರಿ ಅ.ಪ


ಮುಕ್ತಗಣ ನೋಡಯ್ಯ ನಿತ್ಯಮುಕ್ತಳ ನೋಡು

ಶಕ್ತವಿಧಿ ವಾಣೀಶ ಭಕ್ತಿ ದೇವ

ಪಕ್ಷಿಪತಿ ಫಣಿ ರುದ್ರ ಇವರ ಸತಿಯರ ನೋಡು

ಉತ್ತಮೋತ್ತಮ ಸುಖವ ಸೂರೆಗೊಂಬರೊ ಹರಿಯೆ 1


ನಿನ್ನಾರು ಮಹಿಷಿಯರ ಸುರಪ ಸುರಗಣ ನೋಡು

ಪುಣ್ಯತಮ ಸುರಮನಿಯ ಭೃಗುವ ನೋಡು

ಚಿಣ್ಣ ಪ್ರಹ್ಲಾದನನ್ನ ಬಲಿ ಧ್ರುವ ಭೀಷ್ಮನ್ನ

ಇನ್ನು ದ್ರೌಪದಿ ಶುಕನ ಆನಂದ ನೋಡಂiÀi್ಯ 2


ಅಂಬರೀಷನ ನೋಡು ರಾವಣಾನುಜ ಜನಕ

ಗಂಭೀರ ಪರೀಕ್ಷಿತ ವೃತ್ತ ಶಬರಿ

ತುಂಬಿದ ಸದ್ಭಕ್ತ ಋಷಿಪತ್ನಿಯರ ನೋಡು

ಕಂಬನಿಯ ಸುರಿಸುವೆನೊ ಕರುಣಿಸೊ ಹೃದ್ಗøಹದಿ 3


ನೀಯೆನ್ನ ಸತ್ವ ನೀಯೆನ್ನ e್ಞÁನ

ನೀಯೆನ್ನ ಮನ ಬುದ್ಧಿ ಕರುಣ ನಿಧಿಯೆ

ನೀಯೆನ್ನ ಪ್ರಾಣರತಿ ನೀಯೆನ್ನ ಸತ್ಕರಣ

ನೀಯೆನ್ನ ಧೃತಿ ಶಾಂತಿ ನೀಯೆನ್ನ ಸರ್ವನಿಧಿ 4


ನೀ ಮಾಡೆ ನಾ ಮಾಳ್ಪೆ ನೀನಾಡಿಸಿದರಾಡ್ವೆ

ಕಾಮದನೆ ಕಾಮಪಿತ ಜಯೇಶವಿಠಲ ಶ್ರೀ

ರಮಣ ಸರ್ವೇಶ ಈ ಮನಸು ನಿನ್ನಲ್ಲಿ

ಪ್ರೇಮದಿ ನೆಲಸಿ ಇರುವಂತೆ ಕೃಪೆಮಾಡು 5

****

No comments:

Post a Comment