ನಾರದ ಮುನಿಯೇ ಎನ್ನೊಳು ನಮ್ಮನೀರಜಾಕ್ಷನ ಮುಖವನು ತೋರೋ ಪ
ಧ್ರುವತಾಯಿ ಮಾತಿಗೆ ನೊಂದಾನು ತನ್ನಭವನದಾಸೆಯ ಬಿಟ್ಟು ಬಂದಾನುಶ್ರವಣ ಮಾಡುತ ಮಂತ್ರ ಅಂದಾನು ಹರಿನವನವ ಮಹಿಮೆಯ ತಿಳಿದಾನು 1
ಮಧುವನದೊಳು ತಪಮಾಡಿದ ಹೃದಯದೊಳುಮಧುಸೂದನ ಮುಖನೋಡಿದಾಮುದದಿಂದ ಹರಿಯನ್ನು ಸ್ತುತಿಸಿದಾ ಮುಕ್ತಸದನ ಶ್ರೀ ಹರಿಪುರ ಸೇರಿದಾ 2
ವರ ಪ್ರಹ್ಲಾದಗೆ ಗರ್ಭದಿ ಕೊಟ್ಟಸುರಮುನಿ ನಿನ್ನುಪದೇಶದಿಹರಿಯನು ಭಜಿಸಿದ ಧೈರ್ಯದಿ ಶಾಲೆತರುಳರಿಗೆಲ್ಲ ಹೇಳಿದ ಬೋಧಿ 3
ಶ್ರೇಷ್ಠ ನಿನ್ನುಪದೇಶ ಕೇಳುತ ಹೀಗೆಎಷ್ಟೋ ಜನರು ಹರಿ ಕಾಣುತಮೆಟ್ಟಿದರು ಹರಿಪುರ ಸುಖಿಸುತ ಎನ-ಗಷ್ಟುಪದೇಶ ಮಾಡೆಲೋ ತಾತ 4
ಸುಂದರ ವೀಣೆಯ ಕರದೊಳು ಪಿಡಿದುಇಂದಿರೇಶನ ಭಕ್ತ ಸಭೆಯೊಳುನಂದ ಬಾಲನ ಕಥೆ ಜಗದೊಳು ಪೇಳಿವಂದಾರು ಕವಿ ಕರುಣಾಳು 5
****
No comments:
Post a Comment