ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳಿ ನಗಬಹುದು ಮಜಾತ್ಮರು | ಕೇಳಿ ನಗಬಹುದು | ಹೋಲಿಕೀಲ್ಯಾಡುವ ಜನದ ಜ್ಞಾನದ ನುಡಿ ಪ
ದಂಭಮಾನದಲಿ | ಮನಸಿನ | ಹಂಬಲ ಘನವಿರಲಿ | ಥಂಬಿಸಿ ಕರ್ಮವ | ಸರ್ವಂ ಬ್ರಹ್ಮಮಯ | ವೆಂಬುದು ತೋರುವರಾ ನುಡಿಗಳಾ 1
ಆಶಾಪಾಶಗಳು | ವಿಷಯದಿ | ಲೇಸಿಗೆ ಬಿಗಿದಿರಲು | ನಾಶಿವ ನಾ ಬ್ರಹ್ಮನೆಂ | ದೊದರುತ ನಾನಾ | ವೇಷವ ಧರಿಸುವರಾ | ನುಡಿಗಳು 2
ಚಿನುಮಯ ನಿಜ ಸುಖವಾ | ಕಂಗಳ ಕೊನಿಯಲಿ ದೋರಿಸುವಾ | ಘನ ಗುರು ಮಹಿಪತಿ ಪ್ರಭು ಕರುಣಾನಂದ | ಅನುಭವಿಸಿದ ಲ್ಯಾಡುವ ನುಡಿಗಳಾ 3
***
No comments:
Post a Comment