ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶ್ರೀ ಗುರುರಾಯ | ಶರಣು ಬುಧ ಜನಪ್ರೀಯ | ಶರಣು ಪಾವನ | ಶರಣು ನಮ್ಮಯ್ಯ ಪ
ಧರಣಿಯೊಳಗ ವಿದ್ಯ ದಾವರಣವಿಕ್ಷೇಪದಿ ಹರಿಯ ಭವ ಜನುಮ ಮರಣ ಬಲಿಗೆ ಸಿಲುಕಿ | ಹರಣ ಹಾಕುತಿದೆ ನೋಡೀ ಕರುಣದಿಂದ ಭಯ ನೀಡಿ | ತರಣೋಪಾಯ ದೋರಿ ದೀನೋದ್ಧರಣ ಮಾಡಿ ಹೊರೆದೇ 1
ನರದ ಹುಳುವ ತಂದು ಮಂದಿರದೊಳಿಟ್ಟು | ತನ್ನಂಗ ತೆರದಿ ಮಾಳ್ಪಾ ಭೃಂಗಿಯ ತೆರದೆ ನಂಬಿದವರಾ | ಕರೆದು ಬೋಧಾಮೃತದ ನುಡಿವೆರದು ಚಿನುಮಯಾನಂದ ಮರದ ಠಾವ ತಪ್ಪಿಸಿ ಎಚ್ಚರದೊಳು ನಿಲಿಸಿದೇ 2
ಮುಕುತಿ ಸಾಧನವಾದಾ ಭಕುತಿ ನವ ವಿಧ ಶಾಸ್ತ್ರ | ಯುಕುತಿ ಪ್ರಾಬಲ್ಯ ವಿರಕ್ತಿಯನಗಿಲ್ಲಾ | ಶಕುತ ಗುರು ಮಹಿಪತಿಯ ಭಕುತ ನೆನಿಸಿದಕಿನ್ನು ಅಕುತೋ ಭಯ ಹೊಂದುವಾ ಶಕುತಿ ನೀಡಯ್ಯಾ3
***
No comments:
Post a Comment