ಕಾಖಂಡಕಿ ಶ್ರೀ ಕೃಷ್ಣದಾಸರು
ತಿಳಿವಿಕೆ ನೋಡಣ್ಣಾ ಪ
ಉಬ್ಬುಸಗೊಳುತಲಿ ಹುಡುಕುತ ತಂದು | ಒಬ್ಬರ ಪದ ಪದ್ಯಗಳನೇ ಹಳಿದು | ಉಬ್ಬುಬ್ಬಿ, ಹೇಳುವ ತನ್ನದೆಂದು 1
ಹಂಬಲಿಸದೆ ಮೃದು ತಂಪಿನ ಯಲಿಯಾ | ಬೆಂಬಿಸ ದಾರಿಸಿ ಮುಳ್ಳಿನ ಕೊನೆಯಾ | ತಿಂಬುವ ಒಂಟೆಯ ಮತಿಪರಿಯಾ 2
ಪರಿಪರಿ ಶೃಂಗಾರದ ಕಲೆಯಂಗಳು | ಪರಿ ಅರೆಯದೆ ಇರಲು | ಕೊರತೇನು ಪತಿವ್ರತೆ ಗುಣಗಳು 3
ಸಾರಸ ತಿಳಿಯದೇ ನೋಡಾ| ನಿಬ್ಬಿರೆನುತಾ ಬಿಟ್ಟವ ಬಲು ಮೂಢಾ | ಹಬ್ಬುವಾ ಚಾತುರತನ ಕೂಡಾ 4
ಬರೆ ಬೀರುತ ಮಾತುಗಳನೆ ಬಚ್ಚಾ | ಧರೆಯೊಳು ಹೆಮ್ಮಿಗೆ ಬಿದ್ದನು ಹುಚ್ಚಾ | ಗುರು ಮಹಿಪತಿ ಸುತ ಪ್ರಭು ಮೆಚ್ಚಾ 5
****
No comments:
Post a Comment