Wednesday 1 September 2021

ಮೊದಲಕಲ್ಲು ಶೇಷದಾಸರೊಂದಿಗೆ ಸಂಪರ್ಕ ankita gurugovinda vittala muddu mohana dasa stutih

 ಮೊದಲಕಲ್ಲು ಶೇಷದಾಸರೊಂದಿಗೆ ಸಂಪರ್ಕ

ಮುದದಿ ಪಾಲಿಸೋ ಮುದ್ದು ಮೋಹನ ರಾಯಾ

ಮದ್ಗುರುವರ ಪ್ರೀಯಾ ಪ


ಮಧ್ವೇಶನ ಪದಪದುಮ ಪೂಜಿಪ ಮಧುಪಾ

ಪರಿಹರಿಸೆಲೊ ತಾಪಾ ಅ.ಪ


ಜನುಮಪೊತ್ತೆ ನೀ ದೊಡ್ಡ ಬಳ್ಳಾಪುರದೀ |

ಅನುನಯದಲಿ ಓದೀ |

ಗುಣವಂತೆಯು ಕನ್ಯೆಯತಾ ಸ್ವೀಕರಿಸೀ |

ಕನ್ಯಾ ಸೆರೆಬಿಡಿಸೀ

ವನಜನಾಭನನು ಕಾಣಲು ಮನಮಾಡೀ

ಶ್ರೀವರನನು ಬೇಡೀ

ಗಾನಲೋಲ ಮುದ್ದು ಮೋಹನ ವಿಟ್ಠಲನಾ

ಘನನಾಮಪೊತ್ತೆ ನಿನ್ನಾ 1


ಅಂಗಜಗಳುಕದಲರ್ಧಾಂಗಿಯ ನಾಳೀ |

ಯಾತ್ರೆಗೆ ಮನತಾಳೀ ||

ಗಂಗೆಯಾತ್ರೆ ಮೂರೊಂದುಬಾರಿ ಮಾಡೀ |

ಉಡುಪಿಗೆ ಬಲುಬಾರೀ |

ತುಂಗಮಹಿಮ ನಮ್ಮ ವೆಂಕಟ ನಿಲಯನ್ನಾ |

ತುಂಗೆ ತೀರಗನನ್ನಾ |

ಭಂಗವಿಲ್ಲದಾನೇಕಬಾರಿ ನೋಡೀ |

ಮಂಗಳಾಂಗನ ಪಾಡೀ 2


ತರಮನ್ಹಳ್ಳಿ ಹನುಮಪ್ಪನ ತಾ ವಲಿಸೀ |

ನಿರಶನವ್ರತಚರಿಸೀ |

ಸಿರಿವಿಜಯ ವಿಟ್ಠಲನ ನಿಜಪುರದಲ್ಲೀ |

ಸಂಸ್ಥಾಪಿಸುತಲ್ಲೀ |

ಪರಮಶಿಷ್ಯರೀ ಗುಪದೇಶಗಳನ್ನಾ |

ವಿರಚಿಸಿದಿಯೊ ಘನ್ನಾ |

ಪರಿಸರಮತ ಸರ್ವೋತ್ತಮ ವೆಂದೂ |

ಸಾರಿದೆ ದಯಾಸಿಂಧೂ 3


ಬುದ್ಧಿಪೇಳುತಲಿ ತಿದ್ದಿದೆ ಸುಜನರನೂ |

ನಡೆನುಡಿಗಳಲಿನ್ನೂ |

ಮದ್ಗುರುಸಿರಿ ತಂದೆ ಮುದ್ದುಮೋಹನರಾ |

ಉದ್ಧರಿಸಿದ ಧೀರಾ |

ಮಧ್ವಮತಾಗಮ ಸದ್ವನಧಿವಿಹಾರಾ |

ಬುಧಜನರಘಹರಾ |

ವಿದ್ವದಾರ್ಯ ಶ್ರೀ ಮುದ್ದು ಮೋಹನ ರಾಯಾ

ಮುದಬೇಡುವೆ ಜೀಯಾ 4


ಕೃತನಿತ್ಯಾಹ್ನಿಕನಾಗಿ ತೆವಳಿಬಂದೂ |

ಚಕ್ರದಿ ಕುಳಿತಂದೂ |

ವತ್ಸರ ವಿಳಂಬಿವಧ್ಯ ಕಾರ್ತಿಕದೀ |

ಚತುರ್ದಶಿ ನಡುದಿನದಿ |

ಅತುಳ ಮಹಿಮಗುರು ಗೋವಿಂದ ವಿಠಲನ್ನ |

ಹೃದಯಾಬ್ಜದಿಪವನಾ |

ಆತುಮಾಂತರದಿ ಕಾಣುತಲವನಾ |

ಕಿತ್ತೊಗೆದೆಯೊ ತನುವಾ 5

***


No comments:

Post a Comment