ಕಾಖಂಡಕಿ ಶ್ರೀ ಕೃಷ್ಣದಾಸರು
ಸಾವಧಾನಾಗಿ ಮಾಡೆಲೋ ಗುರುಭಕ್ತಿ | ಕಾವಕರುಣಾಳುದೋರಿ ನಿಜ ಮುಕ್ತಿ ಪ
ಗುರುನಾಮ ಸ್ಮರಣೆ ಅನುದಿನಾ | ಗುರುಮೂರ್ತಿಯ ಮಾಡಿ ನಿಜಧ್ಯಾನಾ | ಗುರುಚರಣವ ಪೂಜಿಸು ನಿಧಾನಾ | ಗುರು ನಮನದಿ ಹಾಕಿ ಲೋಟಾಂಗಣಾ 1
ಗುರುಭಕ್ತರ ಸಂಗವನು ಮಾಡಿ | ಗುರು ಕರುಣದ ಮಹಿಮೆಯ ಪಾಡಿ | ಗುರುವಾಕ್ಯ ಪ್ರಸಾದವನು ಬೇಡಿ | ಗುರು ಅಭಯವ ಕೊಂಡು ನಲಿದಾಡಿ 2
ಗುರುವಿನಲ್ಲಿ ಹಿಡಿಯದೆ ನರಭಾವಾ | ಗುರುವಿಗರ್ಪಿಸಿ ತನುಧನ ಮನ ಜೀವಾ | ಭವ ಬಂಧನವಾ | ಗುರುಮಹಿಪತಿ ಬಾಲನಾಗಿರುವಾ 3
***
No comments:
Post a Comment