ತನ್ನೊಳು ತಿಳಿಯೊ ಪ್ರಾಣಿ ಪುಣ್ಯಸಾಧನಿ ಪ
ತನ್ನಿಂದಲೆ ತಾ ನೋಡುವ ಖೂನ ಚೆನ್ನಾಗ್ಯದನುಭವ ಜ್ಞಾನ ಸನ್ಮತ ಸುಖದೋರುವ ಚಿದ್ಫನ ಭಿನ್ನವಿಲ್ಲದೆ ನೋಡುವದುನ್ಮನ 1
ಮೂಲವಿಡಿದು ನಿಜ ನೋಡುವದರಿಂದ ಮ್ಯಾಲೆ ದೋರುತಲದೆ ಬ್ರಹ್ಮಾನಂದ ಕೀಲು ತಿಳಿದರೆ ಸದ್ಗುರು ಕೃಪೆಯಿಂದ ಒಲಿದು ಬಾಹನು ತಾ ಮುಕುಂದ 2
ಸೆರಗವಿಡಿದು ನೋಡುಲು ಗುರುಮುಖ ಮೂರು ಲೋಕಕ ಬಲು ಪರಮ ವಿವೇಕ ತರಳ ಮಹಿಪತಿ ಆತ್ಮಾನುಭವ ಸುಖ ದೋರುತಲದೆ ತಾ ಘನ ಕೌತುಕ 3
***
No comments:
Post a Comment