Wednesday 1 September 2021

ಭಾವವಿಲ್ಲದ ಬಯಲ ಭಜನೆಗೆ ದೇವನೆಂದಿಗು ವಲಿಯನು ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಭಾವವಿಲ್ಲದ ಬಯಲ ಭಜನೆಗೆ | ದೇವನೆಂದಿಗು ವಲಿಯನು | ಈ ವಿಷಯ ಫಲದಾಸೆ ಮನದೊಳು | ಭಾವಿಸುತ ವೃತ ತಪಗಳ್ಯಾತಕೆ ಪ 

ಮೀನು ನೀರೊಳಗಿದ್ದರೇನೈ | ಧ್ಯಾನವನು ಬಕ ಮಾಡಲು | ಮೌನದಲಿ ಕೋಗಿಲೆಯು ಇದ್ದರ | ದೇನು ವನವಾಶ್ರಯಿಸಿ ಮರ್ಕಟ 1 

ಉರಗ ಪವನಾಹಾರ ಭಸ್ಮವ | ಖರ ವಿಲೇಪನ ಮಾಡಲು | ತರು ದಿಗಂಬರವಾಗಿ ಮಂಡುಕ | ಕೊರಳೊಳಕ್ಷರ ಜಪಿಸಲೇನದು 2 

ಮೂಷಕ ಗುಹ್ಯಲಿರಲೇ | ನರಿತು ಗಿಳಿ ಮಾತಾಡಲು | ಗುರು ಮಹಿಪತಿ ಬೋಧವಾಲಿಸಿ | ಹರಿಯ ಭಾವದಿ ನಂಬಿ ಸುಖಿಸಿರೋ 3

***


No comments:

Post a Comment