Wednesday, 1 September 2021

ಮಂಗಳಂ ಜಯ ಮಂಗಳಂ ಶುಭ ಮಂಗಳೆನ್ನಿರೇ ಹಿಂಗದಂತರಂಗ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಮಂಗಳಂ ಜಯ ಮಂಗಳಂ ಶುಭಮಂಗಳೆನ್ನಿರೇ ಹಿಂಗದಂತರಂಗಲಿಪ್ಪಾ ನಂಗನಯ್ಯಗೆ ಪ 


ಹೆಣ್ಣ ಮಾಡಿತಮನ್ನ ವಿಕ್ರಮ ಹೆಣ್ಣವೆನಿಸಿ ಹೆಣ್ಣಿಗೊಲಿದು ಹೆಣ್ಣು ತೊ ಡಿಯೊಳಿನ್ನು ತಾಳಿ ಹೆಣ್ಣ ಮಡ ದಂಗೆ ಹೆಣ್ಣಿನಳಿದು ಹೆಣ್ಣೆ ನೆಬ್ಬಿಸಿ ಹೆಣ್ಣ ಹಲವರೊಡನೆ ಆಡಿದ ಹೆಣ್ಣ ವೃತಗೆಡಿಸಿ ಕುದುರೆ ಯಾರೋಹಣ ಗೈದಂಗೆ 1 

ನಿಗಮ ತಂದು ನಗವನೆತ್ತಿ ಜಗವನುಳಹಿ ಮಗುವಿಗೊಲಿದು ತುಂಬಿ ಮಿಗಿಲ ಭೂಸುರಗಳ ಹೊರದಂಗೆ ಬಿಗಡಗೊಲಿಸಿದ ಸಗಟನೊತ್ತಿ ವಿಗಡ ಕಲ್ಕಿಗೆ 2 

ಮತ್ಸ್ಯರೂಪದಿ ಕಚ್ಚಪಾಗಿ ಸ್ವಚ್ಛಕೋಡದಿ ಬೆಚ್ಚ ನರಹರಿ ಅಚ್ಚ ವಾಮನ ನಿಚ್ಛ ಕೊಡಲಿಯ ಮಚ್ಚು ಜನ ಕಂಗೆ ಇಚ್ಛ ನಡೆಸಿದ ಮೆಚ್ಚಿ ಗೋಕುಲ ಹುಚ್ಚು ಮಾಡಿದ ಬಾಲನೆನಿಸಿ ಸಚ್ಚರಿತ ಕಲಿನಾಶ ಮಹಿಪತಿ ನಂದ ನೊಡಿಯಂಗೆ 3

****


No comments:

Post a Comment