Wednesday, 1 September 2021

ಸಿಂಧೂರ ವದನ ಸಿಂಧುಶಯನ ಪ್ರಿಯಾ ಸಿಂಧುಜಾತಗೆ ಶಾಪವನಿತ್ತ ಅಂಬಿಕಾ ತನಯಾ ankita venkatanatha

..

" ಶ್ರೀ ಗಣಪತಿ ಸ್ತೋತ್ರ "

ರಚನೆ : ಆಚಾರ್ಯ ನಾಗರಾಜು ಹಾವೇರಿ

ಮುದ್ರಿಕೆ : ವೇಂಕಟನಾಥ 


ಸಿಂಧೂರ ವದನ 

ಸಿಂಧುಶಯನ ಪ್ರಿಯಾ ।

ಸಿಂಧುಜಾತಗೆ ಶಾಪವನಿತ್ತ 

ಅಂಬಿಕಾ ತನಯಾ ।।

ಸಿಂಧು ವರದನ ದಯದಿ 

ಭಾರತ ಬರೆದ ವಿಜಿತಕಾಮ ।

ಸಿಂಧುಜಾ ಪತಿಯ 

ಕಾರುಣ್ಯಪಾತ್ರ ಭೂತಾಂಬರಾಧಿಪ ।।

ವಿಘ್ನಗಳ ಪರಿಹರಿಸೋ 

ದ್ವಿರದವರದನೆ  ।

ವಿಘ್ನಾಂಧಕಾರಕೆ ಶರಶ್ಚಂದಿರ 

ವಿಶ್ವಂಭರ ವೇಂಕಟನಾಥ ।।

" ವಿವರಣೆ "

ಸಿಂಧೂರ ವದನ = ಗಜಮುಖ

ಸಂಧುಶಯನ = ಶ್ರೀಮನ್ನಾರಾಯಣ

ಅಂಬಿಕಾ ತನಯ = ಪಾರ್ವತಿ ಪುತ್ರ

ಸಿಂಧು ವರದ = ಗಜೇಂದ್ರನ ಉದ್ಧರಿಸಿದ ಶ್ರೀಮನ್ನಾರಾಯಣ

ವಿಜಿತಕಾಮ = ಜಿತೇಂದ್ರಿಯನು

" ಸಿಂಧುಜಾ ಪತಿ "

ಸಮುದ್ರದಿಂದ ಉದಿಸಿದ ಶ್ರೀ ಮಹಾಲಕ್ಷ್ಮೀದೇವಿಯ ಪತಿ = ಶ್ರೀ ಹರಿ

ಭೂತಾಂಬರಾಧಿಪ = ಬ್ರಹ್ಮಾಂಡಗತ ಭೂತಾಕಾಶಕ್ಕೆ ಅಭಿಮಾನಿ

ದ್ವಿರದವದನನೆ = ಗಜಮುಖನೆ

" ವಿಘ್ನಾಂಧಕಾರಕೆ ಶರಶ್ಚಂದಿರ "

ವಿಘ್ನಗಳ ಸಮೂಹವೆಂಬ ಕತ್ತಲೆಗೆ ಶರತ್ಕಾಲದ ಚಂದಿರನಂತೆ ಇರುವವನು

" ವಿಶ್ವಂಭರ "

ಜಗತ್ತನ್ನು ಕಾಪಾಡುವವನು. 

ಜಗತ್ತನ್ನು ದೇಹದಲ್ಲಿ ಧರಿಸಿದವನು.

19 ಮುಖಗಳುಳ್ಳವನು.

ಎಡ ಭಾಗದಲ್ಲಿ - 9 ಮುಖಗಳು 

ಬಲ ಭಾಗದಲ್ಲಿ - 9 ಮುಖಗಳು 

ಮಧ್ಯದಲ್ಲಿ " ಗಜಮುಖ " ವುಳ್ಳವನು.

ಜೀವರ ಬಳಗಣ್ಣಿನಲ್ಲಿರುವ ಭಗವದ್ರೂಪ.

ಶ್ರೀ ವಿಘ್ನರಾಜನ ಉಪಾಸ್ಯ ಮೂರ್ತಿ ವಿಶ್ವಂಭರ  ನಾಮಕ ಪರಮಾತ್ಮ!!

****


No comments:

Post a Comment