ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಬೇಕು ಹರಿಯ ನಾಮಾ ಪ
ನಾಮವೇ ಸ್ನಾನವು ನಾಮವೇ ಸಂಧ್ಯಾನವು| ನಾಮವೇ ಜಪ ತಪ ನಾಮವೇ ಖೂನವು| ನಾಮವೇ ಜ್ಞಾನಾ ನಾಮವೇ ಧ್ಯಾನಾ| ನಾಮವೇ ಧಾರಣ ನಾಮ ನಿಧಾನಾ 1
ಕಾನನ ಮಾರ್ಗದಿ| ಗುಣದ ಪಶುಪರಿ ಕಾಣದೇ ತಿರುಗುವಿ| ಏನು ಪಲವೋ ಮತಿ ಹೀನ ಗುರು| ಜ್ಞಾನದ ಮನಿ ನಿಧಾನದಿ ಕೇಳು2
ಪೋಡವಿಲಿ ಗಂಗೆಯ ತಡಿಯೋಳು ಕುಳಿತಿರೆ| ಕುಡಿಯಲು ಜಲವನು ಹುಡುಕುವ ಭಾವಿಯ| ನಡತಿದು ಛಂದವೆ ಬಿಡು ಬಿಡು ಸಂಶಯ| ಹಿಡಿಗುರು ಮಹಿಪತಿ ಒಡಿಯನ ಬೋಧಾ3
****
No comments:
Post a Comment