..
ನಿನ್ನ ದಾಸನಿವನೇ ಅನನ್ಯ ರಕ್ಷಕನೇ ಪ
ಅನ್ಯರಿಗಾಲ್ಪರಿಯದಂತೆ ಮನ್ನಿಸಿ ಪೊರಿ ಧ್ವರಿಯೇ ಅ.ಪ
ಅನ್ಯನಲ್ಲವೊ ಸ್ವಾಮಿ ಮನ್ನಿಸೀ ಪೊರಿ ಪ್ರೇಮೀ
ಘನ್ನವಿಪತ್ತಿವಗೆ ಬಹುಬನ್ನಬಡಿಸುತಿಹುದೋ 1
ಬಂದ ವಿಪತ್ತನ್ನು ಈಗ ಛಿಂದಿಸಿಬಿಡು ವೇಗ
ಬಂದಾದುರಿತಗಳೆಲ್ಲ ನೀ ನಿಂದ್ರಾದಂತೆ ಮಾಳ್ಪದೋ 2
ಅನ್ಯರಿUಸಾಧ್ಯವಿದು ಎನ್ನ ಮನಕೆ ತೋರುತಿಹದು
ನಿನ್ನನುಳಿದು ಕಾಯ್ವೊರಾರಾಪಾನ್ನ ಜನಪಾಲಾ 3
ಇನ್ನು ಸಂದೇಹವ್ಯಾಕೆ ಘನ್ನ ಮಹಿಮಬೇಡಿಕೊಂಬೆ
ನಿನ್ನ ಸೇವಾ ನಿರುತವಿತ್ತು ಎನ್ನವಚನ ಲಾಲಿಸಯ್ಯಾ 4
ಇವನ ಪೊರೆಯೇ ನಿನಗೆ ಖ್ಯಾತಿ
ಭುವನದೊಳಗೆ ಬಪ್ಪೊದಯ್ಯ
ದೂತಜನಪಾಲ ಗುರುಜಗನ್ನಾಥವಿಠಲ
ತಾನೆ ಪ್ರೀತನಾಗುವನು 5
***
No comments:
Post a Comment