..
ನೀ ಎನ್ನ ಕಾಯಲಿ ಬೇಕೊ - ಘನ್ನ ಮಹಿಮಾ ಪ
ಎನ್ನ ನೀಪರಿಪರಿ ಬನ್ನ ಬಡಿಸುವದು
ಅನ್ಯಾಯ ನಿನಗಿದಾಪನ್ನಪಾಲ ಅ.ಪ
ಘನ್ನ ಮಹಿಮೆಯತೋರಿ - ಎನ್ನ ಕಾಯಲಿ ಬೇಕು
ನಿನ್ಹೊರತು ಗತಿ ಎನಗೆ - ಮುನ್ನಾರು ಗುರುವೆ 1
ಎನ್ನ ಮಾತನು ನೀನು - ಚನ್ನಾಗಿ ಚಿತ್ತೈಸಿ
ಅನ್ಯಜನರಾಬಾಧೆ - ಮುನ್ನ ಕಳೆಯ ಬೇಕೊ 2
ಘನ್ನ ಶಿರಿ ಕೃಷ್ಣನು ತನ್ನ ಸಖನಿಗೆ ಮಹಾ
ಉನ್ನ ತೈಶ್ವರ್ಯವಿತ್ತವ - ನನ್ನ ಕಾಯ್ದ ತೆರದಿ 3
ಇನ್ನು ಪೇಳುವುದೇನೊ ಗುರು - ರನ್ನ ಭವದಾಶ್ರಮವು
ಇನ್ನು ತಿಳಿಯದೆ ನಿನಗೆ -ಘನ್ನ ಸರ್ವಙ್ಞರಾಯಾ 4
ಸನ್ನುತಜನಪ್ರೀಯ - ನಿನಗೆ ಮೊರೆಯಿಡುವೆ
ಘನ್ನ ಗುರು ಜಗನ್ನಾಥ ವಿಠಲ ದೂತಾ ದಾತಾ 5
***
No comments:
Post a Comment