ಪರಮಪ್ರಿಯರೆಂದೆಂಬ ಕರುಣ ಜಲಧಿ | ನಿಮ್ಮ
ಮೊರೆಹೊಕ್ಕವರ ಕಾಯ್ದು ಪೊರೆಯುವಿರಿ ದಯದಿ ಪ.
ಅರಿಯರು ಜಗದೊಳಗೆ ನರರು ನಿವಿ್ಮೂ ಮಹಿಮೆ
ಕರಕರೆಪಡುತಿಹರು ಭವದೊಳಗೆ
ಪರಮ ನಮ್ರತೆಯಿಂದ ಚರಣಕೆರಗಲು ಬಂದು
ಉರುತರದ ಕಾರುಣ್ಯದಿಂದ ಪೊರೆಯುವಿರಿ 1
ಇಲ್ಲವೊ ಆಸೆ ಆಡಂಬರದ ದ್ರೌವ್ಯದಲಿ
ಎಲ್ಲೆಲ್ಲಿ ನೊಡಲು ತತ್ವಬೋಧೆ
ಉಲ್ಲಾಸದಿಂದ ಸಜ್ಜನರಿಗರುಹುತ ಮೋದ
ಎಲ್ಲೆ ಕಾಣಿಸದಂಥ ಆನಂದವೀವ ಗುರು 2
ತಂದೆ ಮುದ್ದುಮೋಹನವಿಠ್ಠಲನೆಂದೆಂಬ ಬಹು
ಚಂದದ ಅಂಕಿತದಿ ಜಗದಿ ಉದಿಸಿ
ಮಂದರಿಗೆ ಸುe್ಞÁನ ತಂದು ರಕ್ಷಿಸುವಂಥ
ಒಂದೊಂದು ಮಹಿಮೆಗಳ ಪೇಳಲೆನ್ನೊಶವೆ 2
ಅನಾದಿಯಿಂದಲಿ ಹೀನ ದೆಸೆಯೊಳಗಿದ್ದು
ನಾನಾ ಜನ್ಮದಿ ಬಂದು ಕರ್ಮದಲಿ ತೊಳಲಿ
ದೀನತ್ವವೈದುವ ಮಾನವನ ಕರುಣಿಸಿ
ಸಾನುರಾಗದಿ ಹರಿಯ ಪದಕೆ ಸೇರಿಸುವಂಥ 3
ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತ ಹರಿ ಎಂತೆಂದು
ಶ್ರೇಷ್ಠ ಕನಿಷ್ಠದ ಅರ್ಥ ತತ್ವ ತಿಳಿಸಿ
ಕಷ್ಟ ಬಿಡಿಸುವ ಜಗತ್ಕರ್ತ ಒಬ್ಬನೆ ಹರಿಯು
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆನುವ 5
****
No comments:
Post a Comment