..
kruti by bhupati vittalaru ( kakhandaki Ramacharyaru)
ಸತ್ಯಜ್ಞಾನ ಮುನಿರಾಯಾ ತವಸ್ಮರಣೆ ಸತತ ಕೊಡು ಜೀಯಾ ಪ
ಜ್ಞಾನಭಕ್ತಿ ವೈರಾಗ್ಯದ ಕಣಿಯೆ ಧ್ಯಾನ ಮೌನ ಜಪ-ತಪಗಳ ನಿಧಿಯೆ ಅ.ಪ
ಸರ್ವತ್ರದಿ ಶ್ರಿ ಹರಿಯನು ಕಾಣುತಸರ್ವಭೂತ ವಿತರತನಾಗಿಸರ್ವೋತ್ತಮನು ಶ್ರೀರಾಮನ ಪೂಜಿಸಿಸರ್ವಜ್ಞಮತ ಸುದಾಂಬುಧಿಗೆ ಚಂದ್ರಮನಾದೆ 1
ಭರತಾರುಣ್ಯದಿ ಪರಮಹಂಸನಾಗಿಧರ್ಮ ಸಾಮ್ರಾಜ್ಯದ ಧುರವ'ಸಿಧರ್ಮ ಸಂರಕ್ಷಣೆ ಮಾಡುತ ಧರೆಯೊಳುಪೂರ್ಣಜ್ಞರ ಧ್ವಜ ಮೆರೆಸಿದ ಧೀರಾ 2
ಲೌಕಿಕವನು ಸಂಪೂರ್ಣ ತ್ಯಜಿಸಿ ನೀ-ಪರಲೋಕ ಸಾಧನ ಲೋಕಕೆ ತಿಳಿಸಿಟೀಕಾರಾಯರ ಸನ್ನಿಧಾನವ ಹೊಂದಿದಶ್ರೀಕಾಂತ ಭೂಪತಿವಿಠ್ಠಲನ ದೂತಾ 3
***
No comments:
Post a Comment