..
kruti by bhupati vittalaru ( kakhandaki Ramacharyaru)
ಮಹಿಪತಿ ಸುತ ಕೃಷ್ಣರಾಯ ಕೃಪೆಯಮಾಡೊ ಮಹರಾಯಾಸವಿಸಲಾರೆ ತಾಪತ್ರಯ ಕರುಣದಿ ಪಿಡಿಕೈಯ್ಯಾ ಪ
ನಿನ್ನ ಕರುಳ ಬಳ್ಳಿಯಲಿ ಜನಿಸಿ ನಿನ್ನ ಮರತೆನೆಂದುನೀನು ಮರೆಯಬೇಡಾ ತಾತಾ ಶಿರದಲಿ ಇಡು ವರದಹಸ್ತಾ1
ನಿಮ್ಮ ಕೀರ್ತನೆ ಕೇಳುವಾಗ ಮೈ ಮರೆತರು ಸತ್ಯಪೂರ್ಣರುಚಕ್ರಧರನ ನಕ್ರಹರನ ತಂದು ತೋರಿದ ಮಹಾಮಹಿಮನೆ 2
ಜ್ಞಾನ ಭಕ್ತಿ ವೈರಾಗ್ಯ ತ್ರಿವೇಣಿ ನಿಮ್ಮ ವಾಣಿಶ್ರೀನಿಧಿ ಭೂಪತಿವಿಠ್ಠಲನ ಒಲಿಸಿದ ಹರಿದಾಸ ಸುಮಣಿ 3
***
No comments:
Post a Comment