..
kruti: tandevaradagopala vittala (ಪ್ರಹ್ಲಾದಗೌಡರು)
ಚಿಂತೆಯನು ಪರಿಹರಿಸು ಚಂದ್ರವದನೇ ಪ
ಚಂದ್ರಶೇಖರನಾಣೆ ಬಹುವಿಧದಿ ನೊಂದು ಭ್ರಾಂತನಾದೆತಾಯಿ ಅ.ಪ.
ಹೆಣ್ಣಿಗೋಸುಗ ಪೋಗಿ ಹೆಣ್ಣಿನಾಶೆಯ ಮಾಡಿ ಮಣ್ಣುಪಾಲಾದೆನೇಬಣ್ಣಕ್ಕೆ ಮರುಳಾಗಿ ಬಾಣಕ್ಕೆ ಗುರಿಯಾಗಿಕಣ್ಣುಕಾಣದೆ ಕೂಪದೊಳು ಬಿದ್ದೆಅನ್ನಪೂರ್ಣೆಯೆ ನಿನ್ನ ಚರಣವನು ನಂಬಿದ ಶರಣನ ಪಾಲಿಸು ತಾಯಿ 1
ಮನನಿಲ್ಲದೆ ಮತ್ತೆ ಮನಬಂದತ್ಯೆರ ತಿರುಗಿ ಮನ್ಮಥನ ಬಯಸಿದೆ ಮಾನಹಾನಿಯಾಗಿ ಹೀನನಾದೆನು ನಾನು ಮನ್ಮಥನ ತಾಯೆಪ್ರಾಣ ಪೋಗೋದು ಲೇಸು ಪ್ರಾಣಿಗಳ ಮಧ್ಯದಿಮನೋಮಾನಿನೀ2
ಮತ್ತಗಜದ ಪಿತ್ತ ಹೆಚ್ಚಾಗಿ ಹುಚ್ಚುಚ್ಚು ಬೊಗಳುವೆನು ಹುಚ್ಚನಂತೆಇಚ್ಛೆ ಪೂರ್ಣವ ಮಾಡಿ ಮಚ್ಛೋದರಿ ಮತ್ಸ್ಯ ಮೂರುತಿ ತಂದೆವರದಗೋಪಾಲವಿಠ್ಠಲನ ಅಚ್ಚಸುಖ ಶರಧಿಯೊಳಿಪ್ಪ ಮೀನಾಕ್ಷಿಯೇ 3
***
No comments:
Post a Comment