Wednesday, 25 August 2021

ತೇರಾನೇರಿ ಮೆರೆದು ಬರುವ ಭೂಸುರ ankita ananda vittala TERANERI MEREDU BARUVA BHOOSURA



ತೇರಾನೇರಿ ಮೆರೆದು ಬರುವ ಭೂಸುರವಂದ್ಯ ಯಾರಕ್ಕ

ಗುರು ರಾಘವೇಂದ್ರರೆಂತೆಂಬೊ ಯತಿಕುಲತಿಲಕ ಕೇಳ್ತಂಗಿ ll ಪ ll


ಛಂದದಿ  ಕುಂದಣ ಮಕುಟವ ಧರಿಸಿದ ಸುಂದರನೀತ ಯಾರಕ್ಕ

ತಂದೆಯ ಅಘಹರಿದು ನರಹರಿಯ ತೋರಿದ ಪ್ರಹ್ಲಾದರಾಯ ಕೇಳ್ತಂಗಿ ll 1 ll


ವಿಪ್ರರು ದಾಸರು ಯತಿತತಿಗಳ ಕೂಡಿ ಬರುತಿಹನೀತ ಯಾರಕ್ಕ

ಕಪ್ಪು ಕೃಷ್ಣನ ಒಪ್ಪಿಸಿ ಕುಣಿಸಿದ ವ್ಯಾಸರಾಯ ಕೇಳ್ತಂಗಿ ll 2 ll


ವರಹಜ ನದಿಯ ತೀರದಿ ಇದ್ದು ಭಕುತರ ಪೊರೆವವ ಯಾರಕ್ಕ 

ಹರುಷದಿ ಆನಂದವಿಟ್ಠಲನ ಸಾರಿದ ಪರಿಮಳಾರ್ಯ ಕೇಳ್ತಂಗಿ ll 3 ll

***


No comments:

Post a Comment