..
kruti by ಬೇಲೂರು ವೈಕುಂಠ ದಾಸರು belur vaikunta dasaru
ಕಾಮಜನಕ ಸತ್ಯಕಾಮ ಜಯ ಸೌಶೀಲ್ಯ
ರಾಮನೆಯಖಿಲ ಜಗತ್ಸ್ವಾಮಿ [ಯೌ] ದಾರ್ಯ ಜಯತು ಪ
ಸಾಮಗಾನಪ್ರಿಯ ಕೋಮಲಶರೀರ ಜಯ
ತಾಮರಸನಯನ ಲಕ್ಷ್ಮೀ ಮನೋಹರನೆ ಜಯ
ಭೂಮೀಶ ಮಾಧವ ಮಹಾ ಮೂರ್ತಿ ಕೀರ್ತಿ ಜಯ
ನೇಮಿ ಜಗದಂತರ್ಯಾಮಿ ಚಾತುರ್ಯ ಜಯತು 1
ರಾಮಕೃಷ್ಣ ಮುರಾರಿ ಜಯತು ಮೇಘ
ಶ್ಯಾಮ ಅಚ್ಯುತಾನಂತ ಜಯತು ನಿ-
ಸ್ಸೀಮ ಲೋಕಶರಣ್ಯ ಜಯತು ಸಾರ್ವ-
ಭೌಮ ವಿರಾಡ್ರೂಪ ಜಯ ಜಯತು 2
ಶ್ರುತಿ ಸ್ತೋಮ ಸಂಸ್ತುತ ಜಯ ಜಯತು ವೈಕುಂ-
ಠೇತಿ ಸುಕ್ಷೇಮ ಲೋಕಾರಾಧ್ಯ ಜಯತು
ಸುತ್ರಾಮಾರ್ಚಿತಾಂಘ್ರಿಯುಗಳ ಜಯತು
ಜ್ಯೋತಿ ಪರಂಜ್ಯೋತಿ ನಿರಾಮಯ ವೇಲಾಪುರೀಶನೆ ಜಯತು3
***
No comments:
Post a Comment