ಏನಿದು ರೂಪ ಶ್ರೀ ನರಹರೆ ।। ಪಲ್ಲವಿ ।।
ಏನಿದು ರೂಪವೋ ।
ಮನಸಿಜನಯ್ಯನೇ
ನೆನಿಸಿದವರ । ಹೃ ।
ದ್ವನಜದೊಳ್ ಮೆರೆವುದೂ ।। ಅ.ಪ ।।
ಮಾರನ ಪಿತನೆಂದು ।
ಕರೆಸಿ ಕೊಂಬುವನಿಗೆ
ಮೋರೆಯೊಳ್ ಮೂರು-
ಕಣ್ಣುಗಳ ಧರಿಸಿರುವುದು ।। ಚರಣ ।।
ಪರಮ ಶಾಂತನೆಂದು ।
ಮೆರೆಯುವೀ ಶ್ರುತಿಯೊಳು
ಕ್ರೂರ ರೂಪದಿಂದ ।
ನರರಿಗೆ ತೋರ್ಪುದು ।। ಚರಣ ।।
ವರ ವೈಜಯಂತಿ । ಯ ।
ರಳೊಳ್ ಧರಿಸುವಗೆ
ಕರುಳ ಹಾರವ ಧರಿಸಿ ।
ವರ ಶಬ್ದ ಮಾಳ್ವೊದು ।। ಚರಣ ।।
ನಾನೇ ದೇವರು ಮತ್ತು ।
ಅನ್ಯರಿಲ್ಲೆಂಬುವ
ಕನಕ ಕಶ್ಯಪ ಮುಖ್ಯ ।
ದನುಜರ ಸೀಳ್ವುದು ।। ಚರಣ ।।
ತರಳ ಕರದಾಕ್ಷಣದಿ ।
ವರ ವೈಕುಂಠವ ಬಿಟ್ಟು ।
ನರಹರಿ ಎನಿಸಿ ನೀ ।
ಭರದಿ ಬಂದಿರುವುದು ।। ಚರಣ ।।
***
No comments:
Post a Comment