ನರಹರಿಯೆ ಪಾಲಿಸೊ ಮುನ್ನ ।
ತರಳ ಪ್ರಹ್ಲಾದನಂತೆನ್ನ -
ದುರಾಸೆ ಬಿಡಿಸಿ ನಿನ್ನ ।
ಚರಣದಲ್ಲಿ ಮನ ನಿರುತದಿ ನಿಲ್ಲಿಸಿ -
ಕರುಣವ ತೋರೋ ।। ಪಲ್ಲವಿ ।।
ತರಳತ್ವದಿ ಬಹು -
ದುರುಳತನದಿ ದಿನ ।
ತೆರಳಿತು ಅರಿಯದೆ -
ದೇಹಂಭಾವದಲ್ಲಿ ।। ಚರಣ ।।
ಗುರುಕುಲವಾಸದಿ -
ಸರಿಯಾಗಿರದೆ ।
ಬರಿದೆ ಕಾಲಚರಿಸಿತು -
ಕ್ರೀಡೆಯಲಿ ।। ಚರಣ ।।
ಬರಲು ಯೌವ್ವನವು -
ಪರಸತಿಯಲಿ ಮನ ।
ನಿರುತದಿಂದಿರಸಿ ನಾ -
ಗರುವದಿ ಮೆರೆದೆ ।। ಚರಣ ।।
ಅನುದಿನದಲಿ ನ-
ವನವ ವಿಷಯದಿ ।
ಮನ ಕುಣಿ ಕುಣಿದು -
ಓಡುವುದಯ್ಯ ಹರಿಯೆ ।। ಚರಣ ।।
ಶ್ರೀ ನರಹರಿಯೆ -
ಇನಿತು ಘಾಸಿಸುವುದು ।
ಘನತೆಯೆ ನಿನಗಿದು -
ವನಜ ಕುವರನಯ್ಯ ।। ಚರಣ ।।
****
No comments:
Post a Comment