Thursday 1 July 2021

ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ಉದಧಿ ankita narahari P

 ..

kruti by pradyumna teertha ಪ್ರದ್ಯುಮ್ನತೀರ್ಥರು


ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ।

ಎಲ್ಲ ಸುಖವನಿತ್ತು ಉದಧಿ

ಆಲಯ ಶರಣ್ಯ ವಿಟ್ಠಲ ।। ಪಲ್ಲವಿ ।।


ಹೃದಯಕಮಲ ಮಧ್ಯದಲಿ ।

ಮುದದಿ ಖಗವನೇರಿ ಚರಿಪ

ಯದುಕುಲಾಬ್ಧಿ ಜಾತ ಚಂದ್ರ ।

ವಿಧಿಶಿವಾದಿ ಉಡುಗಣಾರ್ಚಿತ ।। ಚರಣ


ದಿಟ್ಟಭಕ್ತ ಕೊಟ್ಟ ಇಟ್ಟಗೀ ।

ಮೆಟ್ಟಿನಿಂತಿ ಸಿಟ್ಟು ಇಲ್ಲದೆ ।

ಹೊಟ್ಟೆ ಮನೆಯ ಮಾಡಿಕೊಟ್ಟಿ ।

ಕೆಟ್ಟಮಾತು ನುಡಿದ ಚೈದ್ಯಗೆ ।। ಚರಣ ।।


ಕರಗಳನ್ನೆ ಕಟಿಯಲಿಟ್ಟು ।

ಶರಣುಬಂದ ಭಕ್ತಗೆ ಭವ ।

ಪರಿಮಿತಿಯ ತೋರಿ ನಿರುತ ।

ಪೊರೆಯುವಂಥ ಕರುಣನಿಧಿಯೇ  ।। ಚರಣ ।।


ಪುಂಡರೀಕ ವರದನೆಂದು ।

ಹಿಂಡುಭಕ್ತರು ಪೊಗಳುತಿಹರೊ ।

ಅಂಡಜಧ್ವಜ ನಿನ್ನ ಪಾದ ।

ಪುಂಡರೀಕ ತೋರಿಸಿನ್ನು  ।। ಚರಣ ।।


ಶ್ರೀ ನರಹರಿಯೆ ನಿನ್ನ ।

ಗಾನ ಮಾಡಲೆಷ್ಟು ಸಾಮ ।

ಗಾನಕೆ ನಿಲುಕದ ಮಹಿಮ ।

ಜ್ಞಾನ ಭಕ್ತಿ ಇತ್ತು ಬೇಗ ।। ಚರಣ ।।

****


ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ಉದಧಿ

ಆಲಯ ಶರಣ್ಯ ವಿಟ್ಠಲ ಪ


ಹೃದಯಕಮಲ ಮಧ್ಯದಲಿ ಮುದದಿ ಖಗವನೇರಿ ಚರಿಪ

ಯದುಕುಲಾಬ್ಧಿ ಜಾತ ಚಂದ್ರ ವಿಧಿಶಿವಾದಿ ಉಡುಗಣಾರ್ಚಿತ 1


ದಿಟ್ಟಭಕ್ತ ಕೊಟ್ಟ ಇಟ್ಟಗೀ ಮೆಟ್ಟಿನಿಂತಿ ಸಿಟ್ಟು ಇಲ್ಲದೆ

ಹೊಟ್ಟೆ ಮನೆಯ ಮಾಡಿಕೊಟ್ಟಿ ಕೆಟ್ಟಮಾತು ನುಡಿದ ಚೈದ್ಯಗೆ 2


ಕರಗಳನ್ನೆ ಕಟಿಯಲಿಟ್ಟು ಶರಣುಬಂದ ಭಕ್ತಗೆ ಭವ

ಪರಿಮಿತಿಯ ತೋರಿ ನಿರುತ ಪೊರೆಯುವಂಥ ಕರುಣನಿಧಿಯೇ 3

ಪುಂಡರೀಕ ವರದನೆಂದು ಹಿಂಡುಭಕ್ತರು ಪೊಗಳುತಿಹರೊ

ಅಂಡಜಧ್ವಜ ನಿನ್ನಪಾದ ಪುಂಡರೀಕ ತೋರಿಸಿನ್ನು 4


ಶ್ರೀ ನರಹರಿಯೆ ನಿನ್ನ ಗಾನ ಮಾಡಲೆಷ್ಟು ಸಾಮ

ಗಾನಕೆ ನಿಲುಕದ ಮಹಿಮ ಜ್ಞಾನ ಭಕ್ತಿ ಇತ್ತು ಬೇಗ 5

***

ಶ್ರೀ ಲಕ್ಷ್ಮೀಪ್ರಿಯ ತೀರ್ಥರು " ಶ್ರೀ ಪ್ರದ್ಯುಮ್ನತೀರ್ಥ " ರೆಂದು ನಾಮಕರಣ ಮಾಡಿ, ಪ್ರಣವೋಪದೇಶ ನೀಡಿ " ಪ್ರಜ್ಞಾಪೀಠ " ವೆಂಬ ಹೆಸರಿನಿಂದ ಸಂಸ್ಥಾನವನ್ನು ಸ್ಥಾಪಿಸಿ ನಿರಂತರ ನಡೆಯುವಂತೆ ಮಾಡಿರಿ " ಯೆಂದು ಆದೇಶ ಕೊಟ್ಟರು.



No comments:

Post a Comment