karpara narahari
ಪಾದ ಪದುಮವ ಭಜಿಸೋ ಮಾಧವ ತೀರ್ಥರ ಪ
ಮೇದಿನಿಯೊಳು ನಾಲ್ಕು ವೇದÀಗಳಿಗೆ ಭಾಷ್ಯ
ಸಾದರದಲಿ ರಚಿಸಿದ ಮೋದತೀರ್ಥರ ಸುತರ 1
ಸೂರಿಜನರ ಪರಿವಾರ ಸೇವೆಯ ಕೊಳುತ
ಧಾರುಣಿಯೊಳಗೆ ಮಣೂರು ಪುರದಲಿ ಮರೆವರ2
ವೀಶಗಮನ ಚನ್ನಕೇಶವಾತ್ಮಕನಾದ
ಶ್ರೀಶ ಕಾರ್ಪರ ನರಕೇಸರಿಯನೊಲಿಸಿದವರ 3
****
ರಾಗ : ಆನಂದಭೈರವಿ ತಾಳ : ಅಟ್ಟ
ಪಾದ ಭಜಿಸೋ ಮಾಧವತೀರ್ಥರ ।। ಪಲ್ಲವಿ ।।
ಮೇದಿನಿಯೊಳು ನಾಲ್ಕು ।
ವೇದಗಳಿಗೆ ಭಾಷ್ಯ ।
ಸಾದರದಲಿ ರಚಿಸಿದ ।
ಮೋಡತೀರ್ಥರ ಸುತ ।। ಚರಣ ।।
ಸೂರಿ ಜನರ । ಪರಿ ।
ವಾರ ಸೇವೆಯ ಕೊಳುತ ।
ಧಾರುಣಿಯೊಳಗೆ । ಮ ।
ಣೂರು ಪುರದಲಿ ಮೆರೆವರ ।। ಚರಣ ।।
ವೀಶ ಗಮನ । ಚೆನ್ನ ।
ಕೇಶವಾತ್ಮಕನಾ ।
ದ ಶ್ರೀ ಕಾರ್ಪರ । ನರ ।
ಕೇಸರಿಯ ನೊಲಿಸಿದವರ ।। ಚರಣ ।।
****
No comments:
Post a Comment