Friday, 17 December 2021

ಶಿವನ ನೋಡಿರೊ ಇಂದು ಸ್ತವನ ಮಾಡಿರೊ ankita vijaya vittala SHIVANA NODIRO INDU STAVANA MAADIRO



 ರಾಗ : ವರಾಳಿ  ಆದಿತಾಳ 




Audio by Vidwan Sumukh Moudgalya


ಶ್ರೀ ವಿಜಯದಾಸರ ಕೃತಿ 


ಶಿವನ ನೋಡಿರೊ ಇಂದು । ಸ್ತವನ ಮಾಡಿರೊ ।
ತವಕದಿಂದ ತಿಳಿದುವೇಗ । ಅವಗುಣಂಗಳ ತೊರೆದು ನಿತ್ಯ॥ಪ॥ 

ಅಂತಕಾಂತ ಪುರವೈರಿ ದಿನಾಂತ ವೃಷಭನೇರಿ ।
ಕಾಂತಿಸಹಿತ ಜನರಂಗಣದಿ ನಿಂತು ಮಾತುಲಾಲಿಪ ಮಹಿಮ॥ 1 ॥ 

ಅಸುರಜನಕೆ ಪ್ರೀತ ಸರ್ವದ ಅಸುರ ವೈರಿಯ ನೇಮದಿಂದ ।
ವಸುಧಿಯೊಳಗೆ ಬಲಿದಾನೇಕಾ ದಶರುದ್ರರೊಳು ಬಲುಗುಣವಂತ॥2॥ 

ದಕ್ಷ ಪ್ರಜೇಶ್ವರನಧ್ವರ ಶಿಕ್ಷಣೆ ಮಾಡಿದ ದಕ್ಷಿಣಮೂರುತಿ ।
ಮೋಕ್ಷಕೆ ಮನಸು ಕೊಡುವ ನಿಟಿಲಾಕ್ಷಣವಂತ ಶಾಂತ ॥ 3 ॥ 

ಕರಿಚರ್ಮಾಂಬರಧಾರಿ ವಾರಿಧರ ತ್ರಿಶೂಲ ಡಮರುಗಪಾಣಿ ।
ಶರಗದ್ದುಗೆ ಸುಮೇರು ವೇದಾ ತುರಗವಾಗಿರಲಂದು ಅಂದದಿ॥ 4 ॥ 

ನಮಿಸಿ ವರಲಿ ಬೇಡಿ ಭವದ ಮಮತೆ ಓಡಿಸಿ ಭಕುತಿಯಿಂದಲಿ ।
ರಮೆಯರಸ ವಿಜಯವಿಟ್ಠಲನ್ನ ಶಮೆದಮೆಯಿಂದ ಪೂಜಿಪ ಧೀರ॥5॥
***


Sivana nodiro indu stavana madiro |
Tavakadinda tilidu avagunamgala toredu nitya ||pa||

Antakapura vairi | dinanta vrushabaneri |
Santi sahita janaranganadi | nintu matu |
Lalipa mahima ||1||

Surajanate prita sarvada | asura vairiyu nemadinda |
Vasudheyalage balidaneka |
Dasarudrarolu balu gunavanta ||2||

Daksha prajesvaranadhvara | rakshane madida dakshamurti |
Mokshake manasu koduva |
Nitalekshavamta santa ||3||

Karicarmambaradhari vari | dhara trisula
Damaruga pani |Saragadduge sumeruveda |
Turagavagiralandu amdadi||4||

Namisi barali bedi Bavadi | mamate
Odisi Bakutiyindali |rameyarasa vijayaviththalanna |
Same dameyinda pujipa dhira ||5||
***

pallavi

shivana nODirO indu stavana mADirO tavakadinda tiLidu avaguNangaLa toredu nitya

caraNam 1

antakApura vairi dinAnta vrSabhanEri kAnta sahita janarangaNadi nintu mAtu lAlipa mahima

caraNam 2

surajanake prIta sarvada asuravairiyu nEmadinda vasudheyoLage balidAnEkAdasha rudraroLu balu guNavanta

caraNam 3

dakSa rajEshvaranadhvara rakSaNa mADida dakSamUrti mOkSake manasu koDuva nitilEkSanavanta shAnta

caraNam 4

kari carmAmbaradhArI vAridhara trishUla DamarugapANI sharagadduge sumEru vEdA turaga vAgiralandu andadi

caraNam 5

namisi vorali bEDi bhavadi mamate ODisi bhakutiyindal ramayarasa vijayavithalanna kSamadamayanda pUjipa dhIra
***

ಶಿವನ ನೋಡಿರೊ ಇಂದು ಸ್ತವನ ಮಾಡಿರೊ |
ತವಕದಿಂದ ತಿಳಿದು ಅವಗುಣಂಗಳ ತೊರೆದು ನಿತ್ಯ ||pa||

ಅಂತಕಾಪುರ ವೈರಿ | ದಿನಾಂತ ವೃಷಭನೇರಿ |
ಶಾಂತಿ ಸಹಿತ ಜನರಂಗಣದಿ | ನಿಂತು ಮಾತು |
ಲಾಲಿಪ ಮಹಿಮ ||1||

ಸುರಜನತೆ ಪ್ರೀತ ಸರ್ವದ | ಅಸುರ ವೈರಿಯು ನೇಮದಿಂದ |
ವಸುಧೆಯಾಳಗೆ ಬಲಿದಾನೇಕಾ |
ದಶರುದ್ರರೊಳು ಬಲು ಗುಣವಂತ ||2||

ದಕ್ಷ ಪ್ರಜೇಶ್ವರನಧ್ವರ | ರಕ್ಷಣೆ ಮಾಡಿದ ದಕ್ಷಮೂರ್ತಿ |
ಮೋಕ್ಷಕೆ ಮನಸು ಕೊಡುವ |
ನಿಟಲೇಕ್ಷವಂತ ಶಾಂತ ||3||

ಕರಿಚರ್ಮಾಂಬರಧಾರಿ ವಾರಿ | ಧರ ತ್ರಿಶೂಲ
ಡಮರುಗ ಪಾಣಿ |ಶರಗದ್ದುಗೆ ಸುಮೇರುವೇದಾ |
ತುರಗವಾಗಿರಲಂದು ಅಂದದಿ||4||

ನಮಿಸಿ ಬರಲಿ ಬೇಡಿ ಭವದಿ | ಮಮತೆ
ಓಡಿಸಿ ಭಕುತಿಯಿಂದಲಿ |ರಮೆಯರಸ ವಿಜಯವಿಠ್ಠಲನ್ನ |
ಶಮೆ ದಮೆಯಿಂದ ಪೂಜಿಪ ಧೀರ ||5||
*******



No comments:

Post a Comment