Friday, 24 December 2021

ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ others rss


RSS song

ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ

ಬಾಳ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ || ಪ ||


ಕರದಿ ಸಂಘ ಸೂತ್ರ ಹಿಡಿದು

ಭರದಿ ಹಿಂದು ತೇರನೆಳೆದು

ತರತಮ ವಿಷ ಕಳೆಯ ಕೀಳಿ

ಪರಕೀಯತೆ ಪದರ ಸೀಳಿ

ಸಂಘ ಮಂತ್ರ ಜಪಿಸುತ ಬಂಧು ಭಾವ ಬೆಳೆಸುತ  ||೧||


ಸ್ವಾರ್ಥ ಭಾವ ದೂರಗೊಳಿಸಿ

ಕೀರ್ತಿ ಮೋಹ ಬದಿಗೆ ಸರಿಸಿ

ಅರಳಿಸುತಲಿ ಶುದ್ಧ ಶೀಲ

ಅರ್ಪಿಸುತಲಿ ಬದ್ಧ ಬಾಳ

ಬನ್ನಿ ತಾಯ ಸೇವೆಗೆ ಉರಿಸಿ ಕಾಯ ದೀವಿಗೆ  || ೨ ||


ವ್ಯಕ್ತಿ ವ್ಯಕ್ತಿಗಳನು ಬೆಸೆದು

ಭಕ್ತಿ ಶಕ್ತಿಗಳನು ಹೊಸೆದು

ಕುಡಿದು ವೀರವ್ರತದ ಸುಧೆ

ದುಡಿದು ಸೃಜಿಸಿ ಕಾರ್ಯಪಡೆ

ಮಾಡಲಿಹೆವು ನನಸು ನಾಡಿನೇಳ್ಗೆ ಕನಸು || ೩ ||

***


No comments:

Post a Comment