Thursday, 5 November 2020

ಮಲಯಾ ಮಧ್ಯದಲ್ಲಿ vijaya vittala ankita suladi ಭೋಗಾನಂತ ಮಹಾತ್ಮೆ ಸುಳಾದಿ MALAYA MADHYADALLI BHOGAVANTA MAHATME SULADI

Audio by Vidwan Sumukh Moudgalya

 ಶ್ರೀ ವಿಜಯದಾಸಾರ್ಯ ವಿರಚಿತ  ಭೋಗಾನಂತ ದೇವರ ಮಹಾತ್ಮೆ ಸುಳಾದಿ 


 ರಾಗ : ಮಲಯಮಾರುತ 

 ಧ್ರುವತಾಳ 


ಮಲಯಾ ಮಧ್ಯದಲ್ಲಿಪ್ಪುದೇನೊ ಪಾವಿನ ಮೇಲೆ

ಮಲಗಿ ಮುದದಿಂದ ನಸುನಗುವದೇನೊ 

ಪೊಳೆವ ವೈಕುಂಠಾದಿ ಹೊಳಲಾ ತೊರದು ಈ 

ನೆಲದಲ್ಲಿ ವಾಸವಾಗಿಪ್ಪದೇನೊ 

ವಲಯಾಕಾರದ ಜಂಬುದ್ವೀಪದೊಳಗೆ ಉತ್ತುಮ 

ನಿಲಯಾ ನೋಡಿಕೊಳದೆ ಬಂದಾಬಗಿ ಏನೋ 

ಜಲಜ ಸಂಭವಾದ್ಯರು ಒಲಿದು ಪೂಜಿಸುತಿರಲು 

ಇಳೆಯೊಳೀ ನರರಿಂದ ಪೂಜೆಗೊಂಬುವುದೇನೊ 

ಸುಲಭ ಸಾಧ್ಯ ವಿಜಯವಿಠಲ ಭೋಗಾನಂತ 

ಚಲುವ ದೇವರದೇವ ಒಲಿದವರಿಗೆ 

ಗಲಭೆ ಮಲಿಯಾ ಮಧ್ಯವಿಪ್ಪದೇನೊ ll1ll


 ಮಟ್ಟತಾಳ 


ಎವೆ ಇಡದಲೆ ನಿನ್ನಾ ನೋಡುವ ಭಾಗ್ಯ 

ಅವನಿಯೊಳಗೆ ನಿನ್ನಾ ನೋಡುವ ಭಾಗ್ಯ 

ಯಾವತ್ತು ನಿನ್ನಾ ನೋಡುವ ಭಾಗ್ಯ 

ಅವಯವಂಗಳು ಇಂದು ನೋಡುವ ಭಾಗ್ಯ 

ದಿವಿಜಾದಿಗಳಿಗೆ ಮನಕೆ ದೂರ 

ಭವ ಮನುಜಾ ನಿನ್ನಾ ನೋಡುವ ಭಾಗ್ಯ 

ಮಾಣವಾದದುಪಾವನಕಾಯ 

ನವಮೋಹನ ವಿಜಯವಿಠಲಾನಂತ 

ಕವಿಗಳ ಮನೋಹರಾ ಭವಭಯವಿದೂರ 

ದಿವಾಕರ ವರದ ದಿವಾಕರಕುಲಜಾತ ll2ll


 ತ್ರಿವಿಡಿತಾಳ 


ಒಂದು ಬಾಗಿಲಲ್ಲಿ ಆನಂದವಾದಾ ಪಾದಾ 

ದ್ವಂದರವಿಂದವಾ ಬಿರುದಿನಾ ಪೆಂಡೆಯಾ 

ಅಂದಿಗೆ ಪೊಂಗೆಜ್ಜೆ ಪರಡು ಬೆರಳಾ ಮುದ್ರೆ 

ಇಂದು ಲಜ್ಜಿತನಾದ ಚಂಧಾ ಪಾದದ ಉಗುರು 

ಮಂದಾಕಿನಿಯ ಪಡದಾ ಉಂಗುಟಾಗ್ರ ಜಂಘೆ 

ಪೊಂದಿ ಪೊಳವಾಜಾನು ವಸನಪಾಟಿಸಿ ನೋಡುವ 

ಇಂದಿರೆಯರಸಿ ಪಾದಾರ್ಚನೆ ಮಾಡುತ್ತ 

ಒಂದೊಂದು ಪರಿಯಲ್ಲಿ ಎಣಿಸಿ ಗುಣಿಸುತಿರೆ 

ಇಂದಾನಂತತಲ್ಪ ವಿಜಯವಿಠಲರೇಯನ 

ಸಂದರುಶನವಾಗಿ ಇಂದು ಈ ಪರಿ ಕಂಡೆ ll3ll


 ಮಟ್ಟತಾಳ 


ಮಧ್ಯಬಾಗಿಲಲನಿರುದ್ಧನ್ನ ನಾಭಿಯ 

ಪದ್ಮವನ್ನು ಕಟಿ ತಿದ್ದಿದ ಉಡಿದಾರ 

ಮುದ್ದು ತ್ರಿವಳಿ ಹೇಮಾ ಅದ್ದಿದ ಶರಗು, ಪ್ರ -

ಸಿದ್ಧ ಉದರವಕ್ಷಶುದ್ಧ ಕೌಸ್ತುಭಮಣಿ 

ಪದ್ಧತಿ ಸರ ಕರ ಪದ್ಮವನ್ನು ಪಿಡಿ 

ದಿದ್ದು ಮನದಲ್ಲಿ ಇದ್ದವನಾ ಕಂಡೆ 

ಉದ್ಧಂಡ ವಿಜಯವಿಠಲ ಭೋಗಾನಂತ 

ಉದ್ಧಾರಮಾಳ್ಪ ಕ್ಷೀರಾಬ್ಧಿಶಯನನೀತಾ ॥4ll



 ಆದಿತಾಳ 


ಎರಡೊಂದನೆ ದ್ವಾರದಲ್ಲಿ ಶಿರಸಾಪೊಳವ ಮುಕುಟಾ 

ಸರಸಕುಂಡಲ ಕರ್ನಧರ ವಕ್ತ್ರನಾಸರಿದ ಪೂ 

ಸರಸಿಜನಯನ ಕಸ್ತುರಿನಾಮ ಫಣೆಯಲ್ಲಿ 

ವರಪುಬ್ಬು ಮತ್ತೆ ಒಂದು ಕರವು ಶೃಂಗಾರದಿಂದ 

ಪರಿಶೋಭಿಸಲು ಈ ಪರಿಯಲ್ಲೀ 

ಉರಗನ್ನ ಪರಿಯಂಕದಲ್ಲಿ ಮಲಾ-

ಗಿರುತಿಪ್ಪ ಪರಮಾತ್ಮ ಸಿರಿಯರಸಾ ವಿಜಯವಿಠಲ 

ಪರಮಭೋಗಾನಂತ ಪರಮರೂಪಶಾಂತ  ll5ll


 ಜತೆ 


ಪೊಕ್ಕಳಿಂದಲಿ ಮಗನಾ ಪೆತ್ತ ಪದುಮನಾಭಾ 

ರಕ್ಕಸರಿಪು ವಿಜಯವಿಠಲಾ ಭೋಗಾನಂತಾ ll6ll

*******


No comments:

Post a Comment