ಗಂಗಾದಿ ಸಕಲ ತೀರ್ಥಂಗಳಿಗಧಿಕ ಶ್ರೀ ಹರಿಯ ನಾಮ
ಹಿಂಗದೆ ನೆನೆವರ್ಗೆ ಮಂಗಳ ಫಲವೀವ ಹರಿಯ ನಾಮ ||ಪ||
ಸ್ನಾನ ಜಪಂಗಳ ಸಾಧಿಸದವನಿಗೆ ಹರಿಯ ನಾಮ
ಜಗದಾದಿಪುರುಷನ ಪೂಜಿಸದವಗೆ ಹರಿಯ ನಾಮ ||
ವೇದ ಶಾಸ್ತ್ರಂಗಳನೋದದ ಮನುಜಗೆ ಹರಿಯ ನಾಮ
ಸಾಧನಂಗಳ ನಾಲ್ಕು ಸಾಧಿಸದವನಿಗೆ ಹರಿಯ ನಾಮ ||
ಕಾಲನ ದೂತರ ತರಿದು ಬಿಸುಡುವುದು ಹರಿಯ ನಾಮ
ಲೋಲ ಶ್ರೀ ಪುರಂದರ ವಿಠಲನ ಒಲುಮೆಗೆ ಹರಿಯ ನಾಮ ||
****
ರಾಗ: ಆರಭಿ. ಅಟ ತಾಳ (RAGA MAYBE DIFFERENT in AUDIO)
pallavi
gangAdi sakala tIrttangaLigadhika shrI hariya nAma hingade nenevarge mangaLa phalavIva hariya nAma
caraNam 1
snAna japangaLa sAdhisadavanige hariya nAma
jnAnavanariyada mUDhAtmanige idu hariya nAma
caraNam 2
vEda shAstrangaLanOdada manujage hariya nAma
sAdhanangaLa nAlgu sAdisadavanige hariya nAma
caraNam 3
kAlana dUtara taridu bisuDuvudu hariya nAma
lOla shrI purandara vittalana olumege hariya nAma
***
ಗಂಗಾದಿತೀರ್ಥ ಫಲಂಗಳ ನೀವುದು- ಹರಿಯ ನಾಮ |
ಹಿಂಗದೆ ಜನರಿಗೆ ಮಂಗಳವೀವುದು- ಹರಿಯ ನಾಮ || pa ||
ವೇದಶಾಸ್ತ್ರಂಗಳ ಅರಿಯದ ಜನರಿಗೆ- ಹರಿಯ ನಾಮ ಜಗ |
ದಾದಿಪುರುಷನನು ಪೂಜಿಸಿದವರಿಗೆ- ಹರಿಯ ನಾಮ |
ಸಾಧಿಸುವೆವು ಪರವೆಂಬಂಥ ಜನರಿಗೆ- ಹರಿಯ ನಾಮ |
ಶೋಧಿಸಿ ಇಟ್ಟ ಚಿನ್ನದ ಗಟ್ಟಿ ಕಾಣಿರೊ- ಹರಿಯ ನಾಮ || 1 ||
ಸ್ನಾನ ಜಪಂಗಳ ಸಾಧಿಸಿದವರಿಗೆ- ಹರಿಯ ನಾಮ |
ದಾನಧರ್ಮಕೆ ಒದಗದ ಮನುಜರಿಗೆ- ಹರಿಯ ನಾಮ |
ಧ್ಯಾನವೊಂದರಿಯದ ಮೂಢಾತ್ಮ ಜನರಿಗೆ – ಹರಿಯ ನಾಮ ।
ಮನುಷ್ಯ ಜನ್ಮವ ಪಾವನ ಮಾಡುವುದು – ಹರಿಯ ನಾಮ || 2 ||
ವೇಳೆವೇಳೆಗೆ ವೆಚ್ಚ-ವ್ಯಯಗಳ ನೀವುದು- ಹರಿಯ ನಾಮ |
ಜಾಳಿಗೆ ಮಾಳಿಗೆ ಮನೆಯ ನೆಚ್ಚದೆ ಪೇಳಿ – ಹರಿಯ ನಾಮ |
ಕಾಲನವರು ಬಂದು ಕದಲಲಾಗದ ಮುನ್ನ- ಹರಿಯ ನಾಮ |
ಶ್ರೀಲೋಲ ಪುರಂದರವಿಠಲನ ಒಲುಮೆಗೆ- ಹರಿಯ ನಾಮ || 3 ||
***
Gaṅgāditīrtha phalaṅgaḷa nīvudu- hariya nāma |
hiṅgade janarige maṅgaḷavīvudu- hariya nāma || pa ||
vēdaśāstraṅgaḷa ariyada janarige- hariya nāma jaga |
dādipuruṣananu pūjisidavarige- hariya nāma |
sādhisuvevu paravembantha janarige- hariya nāma |
śōdhisi iṭṭa cinnada gaṭṭi kāṇiro- hariya nāma || 1 ||
snāna japaṅgaḷa sādhisidavarige- hariya nāma |
dānadharmake odagada manujarige- hariya nāma |
dhyānavondariyada mūḍhātma janarige – hariya nāma।
manuṣya janmava pāvana māḍuvudu – hariya nāma || 2 ||
vēḷevēḷege vecca-vyayagaḷa nīvudu- hariya nāma |
jāḷige māḷige maneya neccade pēḷi – hariya nāma |
kālanavaru bandu kadalalāgada munna- hariya nāma |
śrīlōla purandaraviṭhalana olumege- hariya nāma || 3 ||
Plain English
Gangaditirtha phalangala nivudu- hariya nama |
hingade janarige mangalavivudu- hariya nama || pa ||
vedasastrangala ariyada janarige- hariya nama jaga |
dadipurusananu pujisidavarige- hariya nama |
sadhisuvevu paravembantha janarige- hariya nama |
sodhisi itta cinnada gatti kaniro- hariya nama || 1 ||
snana japangala sadhisidavarige- hariya nama |
danadharmake odagada manujarige- hariya nama |
dhyanavondariyada mudhatma janarige – hariya nama।
manusya janmava pavana maduvudu – hariya nama || 2 ||
velevelege vecca-vyayagala nivudu- hariya nama |
jalige malige maneya neccade peli – hariya nama |
kalanavaru bandu kadalalagada munna- hariya nama |
srilola purandaravithalana olumege- hariya nama || 3 ||
***
No comments:
Post a Comment