Thursday, 5 December 2019

ಬೇಡುವೆ ನೀನು ಹೀಗೆ ಕಾಡುವ ಕೃಷ್ಣನ purandara vittala

ರಾಗ ಕೇದಾರಗೌಳ. ಅಟ ತಾಳ

ಬೇಡುವೆ ನೀನು ಹೀಗೆ
ಕಾಡುವ ಕೃಷ್ಣನ ಕರೆದು ಬುದ್ಧಿಯ ಹೇಳೆ ||ಪ||

ಎಣ್ಣೆ ಮಂಡೆಯಲಿ ಬಣ್ಣ ಬಚ್ಚಲೊಳಗಿರೆ
ಬಣ್ಣಿಸಿ ನೆರೆವೆನೆಂದು ಚದುರತೆಯಿಂದ
ಬೆನ್ನನೊರೆಸಲು ಬಂದು , ಬೆದರುವಳ
ತನುವ ತಕ್ಕೈಸಿ ನಿಂದು ಗೋಪ್ಯಮ್ಮ ಕೇಳು
ಚಿಣ್ಣಜಾರ ನೋಡೆ ಎನ್ನ ನಾಚಿಕೆಗೊಂಡ ||

ನೆಲುವಿಗೆ ಹಾಲನೇರಿಸುವಳ ಕೈಪಿಡಿದು
ಎಲೆಗೆ ಬಾ ಕಿವಿ ಮಾತನಾಡುವೆನೆನುತಲಿ
ಬಲು ಮುದ್ದುಗಳ ಗಲ್ಲಕೆ ಇಕ್ಕುತ ಒತ್ತಿ
ಮೊಲೆಪಿಡಿದು ಕೆಳಕ್ಕೆ ಕೆಡಹಲೇಕೆ
ಕೆಳಗೆ ಬಿದ್ದು ನಿನ್ನ ಬಳಿಗೆ ಬಂದೆವು ಹಾಗೆ ||

ಮನೆಮನೆಯಲ್ಲಿ ದಂಪತಿಗಳಿರ್ದ ಮಂಚ
ಘನರಾತ್ರಿ ನಡುಬೀದಿಯೊಳಿಟ್ಟು ಕುಣಿವನು
ಮನುಮಥನಯ್ಯ ಕಾಣೆ, ನಮ್ಮೆಲ್ಲರ
ಮನಕೆ ಸಂತಸವೀವನೆ, ಗೋಪಿಯೆ ಕೇಳು
ಘನಮಹಿಮನು ನಮ್ಮ ಪುರಂದರವಿಠಲ ||
*******

No comments:

Post a Comment