Thursday, 5 December 2019

ಮಾನಿಸರೊಳು ಮಾನಿಸಾ ಮಾನಸವಿಠಲ purandara vittala

ರಾಗ ಯಮುನಾಕಲ್ಯಾಣಿ ಆದಿ ತಾಳ 

ಮಾನಿಸರೊಳು ಮಾನಿಸಾ, ಮಾನಸವಿಠಲ ||

ಭೀಮರಥಿಯಲೊಬ್ಬ ದಾಸ ಮುಳುಗಿ ಪೋಗೆ
ಪೂಮಾಲೆ ಅಂಬರ ತೋಯದೆ ತೆಗೆದು ತಂದ ||

ಮಾನಸಕನ್ಯಾ ಮದುವೆಗೆ ಒಬ್ಬಳು
ಆ ನಾಲಿಗೆ ಸುಳ್ಳು ಪಾಲಿಗೆ ನಡೆಸಿದ ||

ಆ ಹೆಣ್ಣು ನೆರೆತಿಂದ ನೋಡ ಬಂದಣ್ಣನ
ತಾ ಹೊದ್ದ ಕಂಬಳಿಯೊಳು ಕಟ್ಟಿ ಹೊರಗಿಟ್ಟ ||

ತಾಂಬೂಲವಿತ್ತನೊಬ್ಬ ಗಂಡನುಳ್ಳವಳಿಗೆ
ಪೊಂಬಟ್ಟೆಯ ಮುಂಜೆರಗ ಕೊಯಿಸಿಕೊಂದ ||

ಕಟ್ಟಾಭೀಮನಿಗೊಬ್ಬ ಕಿಟ್ಟಕಠಾರಿಯಂತೆ
ಅಟ್ಟೆಯುರಿಯುತ ಬಂದು ಓಡಿ ಗುಡಿಯ ಪೊಕ್ಕ ||

ಮೈಲಾರ ಬೊಕ್ಕಗೆ ಹಿಂದು ಮುಂದಾಗಿದ್ದು
ಕೈಯ ಕಂಕಣವಿತ್ತು ಸೂಳೆ ಕಾಯಿದು ಬಂದು ||

ಅಂದುಂಟು ಇಂದಿಲ್ಲ ಎಂದೆನ್ನಬೇಡಿರಿ
ಎಂದಿಗಾದರು ಉಂಟು ಪುರಂದರವಿಠಲ ||
***

pallavi

mAnisaroLu mAnisA mAnisaviTTala

caraNam 1

bhIma rathiyalobba dAsa muLugi pOge pUmAle ambara tOyade tegedu tanda

caraNam 2

mAnasa kanyA maduvege obbaLu A nAlige suLLu pAlige naDesida

caraNam 3

A heNNu neredinda nODa bandaNNana tA hodda kambaLiyoLu kaTTi horagiTTa

caraNam 4

tAmbUla vittanobba kaNDanuLLavaLIge bombatteya munjeraga koyisi koNda

caraNam 5

kaTTAbhimanigobba kiTTakathAriyante aTTyuruyuta bandu Odi guDiya pokka

caraNam 6

mailAra bokkage hindu mundAgiddu kaiya kankaNavittu sULe kAyidu bandu

caraNam 7

anduNTu indilla endenna bEDiri endigAdaru uNTu purandara vittala
***

No comments:

Post a Comment