ಯದುಕುಲನಂದನನ ನೋಡುವ
ಬಾರೆ ಲಲಿತಾಂಗಿ ||ಪ||
ಹದಿನಾಲ್ಕು ಜಗವನ್ನು ಪೊರೆವ
ನೀಲಮೇಘಾಂಗನ ||ಅ.ಪ||
ಕನಕಾಂಬರ ಕಾಂಚಿಯ ದಾಮನ ನಗುಮುಖದ ಶ್ರೀಧರನ
ಅಗಣಿತ ಗುಣನಿಧಿ ಜಗವ ಮೋಹಿಪ ಕೃಷ್ಣ ||೧||
ಸಣ್ಣ ಪೊಂಗೊಳಲೂದುತ ಕಣ್ಣ ಸನ್ನೆಯ ಮಾಡುತ
ಚಿಣ್ಣರ ಒಡಗೂಡುತ ಕುಣಿದು ಬಾಹೋ ಕೃಷ್ಣನ ||೨||
ಮಂದಹಾಸ ಮುಖಾಂಬುಜ ಪೊಂದಿದಂಥ ಕಸ್ತೂರಿತಿಲಕ
ಬಂದ ನಮ್ಮ ಪುರಂದರವಿಠಲ ಇಂದಿರೇಶ ಯದುನಂದನನ ||೩||
***
Yadukulanandanana noduva
bare lalitangi ||pa||
Hadinalku jagavannu poreva
nilameghangana ||a.pa||
Kanakambara kanchiya damana nagumukhada sridharana
aganita gunanidhi jagava mohipa krishna ||1||
Sanna pongolaluduta kanna sanneya maduta
chinnara odaguduta kunidu baho krishnana ||2||
Mandahasa mukhambuja pondidantha kasturitilaka
banda namma purandaravittala indiresha yadunandanana ||3|***
pallavi
yadukula nandana nODuva bAre lalitAngi
anupallavi
hadinAlgu jagavannu poreva nIlamEghAngana
caraNam 1
bigiduTTu kanakAmbara kAnciya dAmana nagumukhada
shrIdharana agaNita guNanidhi jagava mOhipa krSNana
caraNam 2
saNNa pongoLalUduta kaNNa sannaya mADuta
ciNNara oDa kUDuta kuNidu bAhO krSNana
caraNam 3
mandahAsa mukhAmbuja pondidantha gandha kastUri tilaka
banda namma purandara viTTala indirEsha yadu nandana nODuva
***
|ಯದುಕುಲನಂದನನ ನೋಡುವ ಬಾರೆ ಲಲಿತಾಂಗಿ ||ಪ||
ಹದಿನಾಲ್ಕು ಜಗವನ್ನು ಪೊರೆವ ನೀಲಮೇಘಾಂಗನ ||ಅ||
ಬಿಗಿದುಟ್ಟು ಕನಕಾಂಬರ ಕಾಂಚನದವನ , ನಗುಮುಖ ಶ್ರೀಧರನ
ಅಗಣಿತಗುಣನಿಧಿ ಜಗವ ಮೋಹಿಪ ಕೃಷ್ಣನ ||
ಸಣ್ಣ ಪೊಂಗೊಳನೂದುತ ಕಣ್ಣ ಸನ್ನೆಯ ಮಾಡುತ
ಚಿಣ್ಣರ ಒಡಗೂಡುತ ಕುಣಿದು ಬಾಹೋ ಕೃಷ್ಣನ ||
ಮಂದಹಾಸಮುಖಾಂಬುಜ ಪೊಂದಿದಂಥ ಗಂಧಕಸ್ತೂರಿತಿಲಕ
ಬಂದ ನಮ್ಮ ಪುರಂದರವಿಠಲ ಇಂದಿರೇಶಯದುನಂದನನ ನೋಡುವ ||
***
ಹದಿನಾಲ್ಕು ಜಗವನ್ನು ಪೊರೆವ ನೀಲಮೇಘಾಂಗನ ||ಅ||
ಬಿಗಿದುಟ್ಟು ಕನಕಾಂಬರ ಕಾಂಚನದವನ , ನಗುಮುಖ ಶ್ರೀಧರನ
ಅಗಣಿತಗುಣನಿಧಿ ಜಗವ ಮೋಹಿಪ ಕೃಷ್ಣನ ||
ಸಣ್ಣ ಪೊಂಗೊಳನೂದುತ ಕಣ್ಣ ಸನ್ನೆಯ ಮಾಡುತ
ಚಿಣ್ಣರ ಒಡಗೂಡುತ ಕುಣಿದು ಬಾಹೋ ಕೃಷ್ಣನ ||
ಮಂದಹಾಸಮುಖಾಂಬುಜ ಪೊಂದಿದಂಥ ಗಂಧಕಸ್ತೂರಿತಿಲಕ
ಬಂದ ನಮ್ಮ ಪುರಂದರವಿಠಲ ಇಂದಿರೇಶಯದುನಂದನನ ನೋಡುವ ||
***
ರಾಗ ಶ್ರೀ ಆದಿತಾಳ (raga tala may differ in audio)
No comments:
Post a Comment