ಹಿಗ್ಗುವೆ ಏತಕೋ, ಈ ದೇಹಕ್ಕೆ
ಹಿಗ್ಗುವೆ ಯಾಕೋ ||ಪ||
ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವ
ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ ||ಅ.ಪ||
ಸತಿ ಪುರುಷರು ಕೂಡಿ ರತಿ ಕ್ರೀಡೆಗಳ ಮಾಡಿ
ಪತನವಾದಿಂದ್ರಿಯ ಪ್ರತಿಮೆಯ ದೇಹಕ್ಕೆ ||೧||
ಆಗಭೋಗಗಳನ್ನು ಆಗುಮಾಡುತಲಿದ್ದು
ರೋಗ ಬಂದರೆ ಬಿದ್ದು ಹೋಗುವ ದೇಹಕ್ಕೆ ||೨||
ಪರರ ಸೇವೆಯ ಮಾಡಿ ನರಕ ಭಾಜನನಾಗಿ
ಮರಳಿ ಮರಳಿ ಬಿದ್ದು ಉರುಳುವ ದೇಹಕ್ಕೆ ||೩||
ಸೋರುವುದೊಂಭತ್ತು ದ್ವಾರದಿಂದಲಿ ಮಲ
ನೀರಿಲ್ಲದಿದ್ಧರೆ ನಾರುವ ದೇಹಕ್ಕೆ ||೪||
ಪುರಂದರ ವಿಠಲನ ಚರಣ ಕಮಲಕ್ಕೆ
ಎರಗದೆ ಇರುತಿಹ ಗರುವದ ದೇಹಕ್ಕೆ ||೫||
***
ರಾಗ – ಭೈರವಿ ತಾಳ – ಆಟ (raga tala may differ in audio)
pallavi
higguve yAkO I dEhakke higguve yAkO
anupallavi
higguva tagguva mugguva kugguva agniyoLage biddu dagdhavAguva dEhakke
caraNam 1
sati puruSaru kUDi rati krIDegaLa mADi patanavAdindriya pratimeya dEhakke
caraNam 2
Aga bhOgagaLannu AgumADutaliddu rOga bandhare biddu hOguva dEhakke
caraNam 3
parara sEveya mADi naraka bhAjananAgi maraLi maraLi biddu uruLuva dEhakke
caraNam 4
sOruvudombhattu dvAradindali mla nIrilladiddhare nAruva dEhakke
caraNam 5
purandara viTTalana caraNa kamalakke eragade irutiha garuvada dEhakke
***
ಹಿಗ್ಗುವಿ ಯಾಕೋ ಈ ದೇಹಕ್ಕೆ ಹಿಗ್ಗುವಿ ಯಾಕೊ || ಪ ||
ಹಿಗ್ಗುವ ತಗ್ಗುವ ಮುಗ್ಗುವ ನೆಗ್ಗುವ
ಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ || ಅ.ಪ ||
ಸತಿ ಪುರುಷರು ಕೂಡಿ ರತಿ ಕ್ರೀಡೆಗಳನಾಡಿ
ಪತನವಾದಿಂದ್ರಿಯ ಪ್ರತಿಮೆಯ ದೇಹಕ್ಕೆ || ೧ ||
ಆಗ-ಭೋಗಗಳನ್ನು ಆಗುಮಾಡುತಲಿಪ್ಪ
ರೋಗಬಂದರೆ ಬಿದ್ದು ಹೋಗುವ ದೇಹಕ್ಕೆ || ೨ ||
ಪರರ ಸೇವೆಯ ಮಾಡಿ ನರಕಭಾಜನನಾಗಿ
ಮರಳಿಮರಳಿ ಬಿದ್ದು ಹೋಗುವ ದೇಹಕ್ಕೆ || ೩ ||
ಸೋರುವದೊಂಬತ್ತು ಬಾಗಿಲದಿಂದಲಿ ಮಲ
ನೀರಿಲ್ಲದಿದ್ದರೆ ನಾರುವ ದೇಹಕ್ಕೆ || ೪ ||
ಪುರಂದರ ವಿಟ್ಠಲನ ಚರಣಕಮಲಕ್ಕೆ
ಎರಗದೆ ಇರುತಿಹ ಗರುವದ ದೇಹಕ್ಕೆ || ೫ ||
***
ಪುರಂದರದಾಸರು
ಹಿಗ್ಗುವೆಯೇಕೊ ಏ ಮನುಜಾಹಿಗ್ಗುವೆಯೇಕೊ ಅ
ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವಅಗ್ನಿಯೊಳಗೆ ದಗ್ಧವಾಗುವ ದೇಹಕೆ ಅಪ
ಸತಿ ಪುರುಷರು ತಮ್ಮ ರತಿಕ್ರೀಡೆಗಳ ಮಾಡೆಪತವಾದಿಂದ್ರಿಯ ಪ್ರತಿಮೆಯ ದೇಹಕೆ 1
ತೋರುವುದೊಂಬತ್ತು ದಾರಿಯ ಮಲವಾದನೀರಿಲ್ಲದಿದ್ದರೆ ನಾರುವ ದೇಹಕೆ 2
ಆಗದ ಭೋಗದ ಆಗು ಮಾಡುತಲಿಪ್ಪರೋಗಬಂದರೆ ಬಿದ್ದು ಹೋಗುವ ದೇಹಕೆ 3
ನರರ ಸೇವೆಯಮಾಡಿ ನರಕ ಭಾಜನನಾಗಿಮರಳಿ ಮರಳಿ ಹುಟ್ಟಿ ನರಳುವ ದೇಹಕೆ 4
ಪುರಂದರವಿಠಲನಚರಣ ಕಮಲಕೆಎರಗದೆ ಇರುತಿಪ್ಪ ಗುರುವಿನ ದೇಹಕೆ 5
***********
No comments:
Post a Comment