ಪುರಂದರದಾಸರು
ರಾಗ ಶಂಕರಾಭರಣ ಆದಿತಾಳ
ಕಡುಕೃಪೆಯಿಂದಲಿ ಹರಿ ಒಲಿದವನಿಗೆ
ನಡೆನುಡಿ ಸತ್ಯವೆ ಸಾಕ್ಷಿ
ದೃಢಭಕ್ತಿಯಿಂದಲಿ ಉಣಲಿಕ್ಕಿದವರಿಗೆ
ಷಡುರಸಾನ್ನವೆ ಸಾಕ್ಷಿ ||
ಮಡದಿ ಮಕ್ಕಳಿಗೆ ಒಡವೆಯನೀಯದಗೆ
ಕಡುದಾರಿದ್ರ್ಯವೆ ಸಾಕ್ಷಿ
ಪಡೆದೊಡವೆಯ ಧರ್ಮಕೆ ಈಯದವ ಬಾಯಿ
ಬಿಡುವುದೆ ಪರರಿಗೆ ಸಾಕ್ಷಿ ||
ಅನ್ನದಾನವ ಮಾಡಿದ ಮನುಜ ದಿ-
ವ್ಯಾನ್ನ ಉಂಬುವದೆ ಸಾಕ್ಷಿ
ಅನ್ನದಾನವನು ಮಾಡದವನು ಕಡು
ದೈನ್ಯ ಪಡುವುದೆ ಸಾಕ್ಷಿ ||
ಕನ್ಯಾದಾನವ ಮಾಡಿದವಗೆ ದಿವ್ಯ
ಹೆಣ್ಣಿನ ಭೋಗವೆ ಸಾಕ್ಷಿ
ಕನ್ಯಾದಾನವ ಮಾಡದವನು ಹೆಣ್ಣು
ಹೆಣ್ಣೆಂದು ಒರಲುವುದೆ ಸಾಕ್ಷಿ ||
ವಸ್ತ್ರದಾನವ ಮಾಡಿದವನು ದಿವ್ಯ
ವಸ್ತ್ರವ ಹೊದೆವುದೆ ಸಾಕ್ಷಿ
ವಸ್ತ್ರದಾನವ ಮಾಡದವಗೆ ನಿರ-
ವಸ್ತ್ರನಾಗಿಹುದೆ ಸಾಕ್ಷಿ ||
ಕಂಡ ಪುರುಷನಿಗೆ ಕಣ್ಣನಿಡುವಳಿಗೆ
ಗಂಡನ ಕಳೆವುದೆ ಸಾಕ್ಷಿ
ಪುಂಡತನದಿ ಪರಸ್ತ್ರೀಯರಳುಪಿದವ
ಹೆಂಡರ ಕಳೆವುದೆ ಸಾಕ್ಷಿ ||
ಪರರಿಗೆ ಒಂದು ತಾನೊಂದುಂಬುವಗೆ
ಜ್ವರಗುಲ್ಮರೋಗವೆ ಸಾಕ್ಷಿ
ಪರಿಪರಿಯಲಿ ಹಿರಿಯರ ದೂಷಿಸುವ
ತಿರಿದುಂಬುವುದೆ ಸಾಕ್ಷಿ ||
ಕ್ಷೇತ್ರದಾನವ ಮಾಡಿದ ಮನುಜಗೆ ಏಕ
ಛತ್ರಾಧಿಪತ್ಯವೆ ಸಾಕ್ಷಿ
ಪಾತ್ರಾಪಾತ್ರವರಿತು ದಾನವ ಮಾಡಿದಗೆ ಸು-
ಪುತ್ರರ ಪಡೆವುದೆ ಸಾಕ್ಷಿ ||
ಭಕ್ತಿಯನರಿಯದ ಅಧಮನಿಗೊಂದು
ಕತ್ತಲೆ ಮನೆಯೆ ಸಾಕ್ಷಿ
ಮುಕ್ತಿಯ ಪಡೆವರು ಪುರಂದರವಿಠಲನ
ಭಕ್ತರಾಗಿರುವುದೆ ಸಾಕ್ಷಿ ||
********
ಕಡುಕೃಪೆಯಿಂದಹರಿ ಒಲದರೆ ಸತ್ಯದನಡೆವಳಿ ಮೌನವೆ ಸಾಕ್ಷಿದೃಡ ಭಕ್ತರಿಗುಣಬಡಿಸಿದಂಥವರಿಗೆಷಡುರ ಸ್ನಾನವೇ ಸಾಕ್ಷಿ ಪ
ಅನ್ನದಾನ ಮಾಡಿದ ಮನುಜಗೆ - ದಿವ್ಯಾನ್ನವುಂಬುವುದೇ ಸಾಕ್ಷಿಅನ್ನದಾನ ಮಾಡದ ಮನುಜಗೆ - ಸರರನ್ನಕೆ ಬಾಯ್ಬಿಡುವುದೆ ಸಾಕ್ಷಿ 1
ಕನ್ಯಾದಾನ ಮಾಡದ ಮನುಜಗೆ ಚೆಲ್ವಹೆಣ್ಣಿನ ಭೋಗವೇ ಸಾಕ್ಷಿಕನ್ಯಾದಾನ ಮಾಡದ ಮನುಜಗೆ -ಪರಹೆಣ್ಣಿನ ಹೋರಾಟವೇ ಸಾಕ್ಷಿ 2
ಪರರಿಗೊಂದು ತಾನೊಂದುಂಬುವರಿಗೆಜ್ವರ -ಗುಲ್ಮ ರೋಗವೇ ಸಾಕ್ಷಿಪರಿಪರಿ ವಿಧದಿಂದ ಹಿರಿಯರ ದೂರುವಗೆತಿರಿದು ತಿಂಬುವುದೇ ಸಾಕ್ಷಿ 3
ಕಂಡ ಪುರುಷಗೆ ಕಣ್ಣಿಡುವ ಸತಿಯು - ತನ್ನಗಂಡನ ಕಳೆಯುದೇ ಸಾಕ್ಷಿಪುಂಡತನದಿಪರ ಹೆಂಗಳೆನುಳುಪುವಗೆಹೆಂಡಿರು ಕಳೆವುದೇ ಸಾಕ್ಷಿ 4
ಕ್ಷೇತ್ರದಾನದ ಮಾಡಿದ ಮನುಜಗೆ - ಏಕಛತ್ರದ ರಾಜ್ಯವೇ ಸಾಕ್ಷಿಮುಕ್ತಿ ಪಡೆದು ತಿಳಿ ಪುರಂದರವಿಠಲನಭಕ್ತನಾಗುವುದೇ ಸಾಕ್ಷಿ 5
*******

No comments:
Post a Comment