ಪುರಂದರದಾಸರು
ಚೆಂದವ ನೋಡಿರೆ ಗೋಕುಲಾ|ನಂದನ ಮೂರುತಿಯ ಪ
ಅಂದುಗೆಪಾಡಗ ಗೆಜ್ಜೆಯ ಧರಿಸಿ |ಧಿಂ ಧಿಂ ಧಿಮಿಕೆಂದು ಕುಣಿವ ಕೃಷ್ಣನ ಅ.ಪಕೊರಳ ಪದಕಹಾರ ಬಿಗಿದು |ತರಳರೆಲ್ಲರ ಕೂಡಿಕೊಂಡು ||ಕುರುಳುಗೂದಲ ಅರಳೆಲೆತಿಯು |ಮಿರು-ಮಿರುಗುತ ಮೆರೆವ ಕೃಷ್ಣನ 1
ಉಡೆಯ ಗಂಟೆ ಘಣಘಣೆನುತ |ನುಡಿಯೆ ಮೆಲ್ಲನೆ ಪಿಡಿದುಕೊಂಡು ||ನಡೆದಾಡುತ ಸಡಗರದಲಿ |ಬೆಡಗ ಮಾಡಿ ಆಡುವ ರಂಗನ 2
ಬಲುಬಲು ಆಶ್ಚರ್ಯದಿಂದ |ನಲಿವ ಪುರಂದರವಿಠಲರಾಯ ||ಹಲವು ಸುಖವ ನಮಗೆ ಇತ್ತ |ಜಲಜಲೋಚನಬಾಲಕೃಷ್ಣನ3
********

No comments:
Post a Comment