Friday, 27 December 2019

ಹೂ ಬೇಕೆ ಪರಿಮಳದಾ ಪರಮ ಪುರುಷ ankita prasanna HOO BEKE PARIMALADA PARAMA PURUSHA






ರಚನೆ : ಶ್ರೀ ವಿದ್ಯಾಪ್ರಸನ್ನ ತೀರ್ಥರು

ಹೂ ಬೇಕೆ ಪರಿಮಳದಾ?
ಪರಮ ಪುರುಷ ನಮ್ಮ ಕೃಷ್ಣನ ತೋಟದ!

ಮಲ್ಲಿಗೆ ಸಂಪಿಗೆ ಜಾಜಿ ಶಾವಂತಿಗೆ
ಮಲ್ಲೆ ಗುಲಾಬಿ ತಾವರೆ ಪಾರಿಜಾತ
ಎಲ್ಲ ವಿಧದ ಮನಕ್ಲೇಶವ ಕಳೆಯುವ
ಪುಲ್ಲನಾಭ ನಮ್ಮ ಕೃಷ್ಣನ ತೋಟದ! || ಹೂ ಬೇಕೆ ?||

ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿಕೇರಿಯಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಲೆಯಿದ
ಮಾರಿದ್ದು ಪೇಳಿದ್ದ ಶೌರಿಯ ಸೊಬಗಿನ || ಹೂ ಬೇಕೆ ?||

ರಂಗುರಂಗುಗಳಿಂದ ಕಂಗೊಳಿಸುವ ಧ್ವಜ
ಬಂಗಾರದ ಕವಿ ಸಂಗ್ರಹಿಸುವ
ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವ
ಅಂಘ್ರಿಯೊಳ್ ಸಂಗದೆ ಮಂಗಳಕರವಾದ || ಹೂ ಬೇಕೆ ?||
****



ರಾಗ : ಷಣ್ಮುಖ  ತಾಳ : ಆದಿ (raga, taala may differ in audio)

ಹೂ ಬೇಕೇ ಪರಿಮಳದ
ಪರಮ ಪುರುಷ ನಮ್ಮ ಕೃಷ್ಣನ ತೋಟದ
ಹೂ ಬೇಕೇ ಪರಿಮಳದ  ॥ ಪ॥


ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ಕೇರಿ  ಕೇರಿಗಳಲ್ಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ  ಬೆಳಗಿದ
ಮಾರೆಂದು  ಪೇಳಿದ ಶೌರಿಯ  ಸೊಬಗಿನ ।।೧।।


ರಂಗು ರಂಗುಗಳಿಂದ  ಕಂಗಳಿಸುವ  ಸ್ವಚ್ಛ
ಬಂಗಾರದ ಛವಿ   ಭಂಗಿಸುವ
ಶೃಂಗಾರಸಿಂಧು ಪ್ರಸನ್ನ ಶ್ರೀಮಾಧವನ
ಅಂಗ್ರಿಯ   ಸಂಗದಿ  ಮಂಗಳಕರವಾದ ।।೨।।
******

Lyrics In English


hU bEke parimaLadA
parama puruSha namma kRuShNana tOTada
hU bEke parimaLadA /pa/

dAradi kaTTilla mAru hAkuvudalla
kEri kErigaLalli mAruvudalla
bhUri bhakutiyeMba bhAriya belegiruva
mAreMdu pELida shauriya sobagina /1/

raMgu raMgugaLiMda kaMgoLisuva svachcha
baMgArada chavi bhaMgisuva
shRuMgArasiMdhu prasanna shrImAdhavana
aMGriya saMgadi maMgaLakaravAda /2/
********

ಪಲ್ಲವಿ:

ಹೂ ಬೇಕೆ ಪರಿಮಳದಾ?

ಪರಮ ಪುರುಷ ನಮ್ಮ ಕೃಷ್ಣನ ತೋಟದ!

ಮಲ್ಲಿಗೆ ಸಂಪಿಗೆ ಜಾಜಿ ಶಾವಂತಿಗೆ

ಮಲ್ಲೆ ಗುಲಾಬಿ ತಾವರೆ ಪಾರಿಜಾತ
ಎಲ್ಲ ವಿಧದ ಮನಕ್ಲೇಶವ ಕಳೆಯುವ
ಪುಲ್ಲನಾಭ ನಮ್ಮ ಕೃಷ್ಣನ ತೋಟದ! || ಹೂ ಬೇಕೆ ?||

ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ

ಕೇರಿಕೇರಿಯಲಿ ಮಾರುವುದಲ್ಲ
ಭೂರಿ ಭಕುತಿಯೆಂಬ ಭಾರಿಯ ಬೆಲೆಯಿದ
ಮಾರಿದ್ದು ಪೇಳಿದ್ದ ಶೌರಿಯ ಸೊಬಗಿನ || ಹೂ ಬೇಕೆ ?||

ರಂಗುರಂಗುಗಳಿಂದ ಕಂಗೊಳಿಸುವ ಧ್ವಜ

ಬಂಗಾರದ ಕವಿ ಸಂಗ್ರಹಿಸುವ
ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವ
ಅಂಘ್ರಿಯೊಳ್ ಸಂಗದೆ ಮಂಗಳಕರವಾದ || ಹೂ ಬೇಕೆ ?||

ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವ
ಪ್ರಸನ್ನ -> ಶ್ರೀ ವಿದ್ಯಾಪ್ರಸನ್ನತೀರ್ಥರ ಕೃತಿ ಇರಬೇಕು.
*********

1 comment:

  1. sir, Instead of Dhwaja , it should be Swachcha - ರಂಗುರಂಗುಗಳಿಂದ ಕಂಗೊಳಿಸುವ ಧ್ವಜ

    ReplyDelete