Thursday, 12 December 2019

ಇದೇ ನೋಡಿರೋ ಸುಸ್ನಾನ ಸದ್ಬೋಧದಲಿಹುದು ankita mahipati

ಭೂಪ್ ರಾಗ ದೀಪಚಂದಿ ತಾಳ

ಇದೇ ನೋಡಿರೋ ಸುಸ್ನಾನ
ಸದ್ಬೋಧದಲಿಹುದು ಮನ ||ಧ್ರುವ||

ಜ್ಞಾನವೆಂಬುದೆ ಪುಣ್ಯನದಿ ಮನ ನಿರ್ಮಲ ಮಾಡುದು ನಾದಿ
ನಾನ್ಯಃ ಪಥವೆಂಬುದು ಓದಿ ಖೂನದೋರುದು ಸುಪಥದ ಹಾದಿ ||೧||

ಜ್ಞಾನ ಭಾಗೀರಥೀ ಸ್ನಾನ ಮಾಡಿ ಮನಮೈಲ ಹೋಯಿತು ನೋಡಿ
ಘನಪುಣ್ಯೊದಗಿತು ಕೈಗೂಡಿ ಅನುದಿನ ಮನ ಮುಳಗ್ಯಾಡಿ ||೨||

ನಿತ್ಯ ಮಹಿಪತಿಗಿದೇ ಸುಸ್ನಾನ ನಿತ್ಯ ಸದ್ಗುರು ನಿಜಧ್ಯಾನ
ಉತ್ತಮೋತ್ತಮಿದೇ ಸಾಧನ ಹಿತದೋರುತಿದೆ ನಿಧಾನ ||೩||
********

No comments:

Post a Comment