ಭಯನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ||ಪ||
ಕ್ಲೇಶಪಾಶವ ಕತ್ತರಿಸಿ ದೋಷನಾಶವನು ಗೈಸಿ
ಮೋಕ್ಷಿಸುವ ಕೇಶವ ನಿಮ್ಮ ನಾಮ ||೧||
ನರಕ ಘೋರದ ಘಟವೆಂಬ ನರಜನ್ಮದುರ್ಘಟ
ತಾರಿಸುವ ನಾರಾಯಣ ನಿಮ್ಮ ನಾಮ ||೨||
ಮದ ಮತ್ಸರವ ಜರಿಸಿ ಭೇದಾಭೇದವ ಹರಿಸಿ
ಸದ್ಗೈಸುತಿಹ ಮಾಧವ ನಿಮ್ಮ ನಾಮ ||೩||
ಗೋವಿಸಿಹ ವಿದ್ಯದ ಮಾಯಾ ಮೋಹವನಳಿಸಿ
ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ ||೪||
ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ
ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ ||೫||
ಮೊದಲು ಮೂವಿಧಿಗಳ ಜರಿಸಿ ಸದಮಲ ಪುಣ್ಯ-
ಪದವೀವ ಮಧುಸೂಧನ ನಿಮ್ಮ ನಾಮ ||೬||
ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ
ಭಾವಭಕ್ತಿ ಈವ ತ್ರಿವಿಕ್ರಮ ನಿಮ್ಮ ನಾಮ ||೭||
ಮರ್ಮಧರ್ಮವನರಿಸಿ ಕರ್ಮಪಾಶವ ಹರಿಸಿ
ಜನ್ಮ ತಾರಿಸುವ ವಾಮನ ನಿಮ್ಮ ನಾಮ ||೮||
ಶ್ರೀಕರವನಿತ್ತು ಸಿರಿಸಕಲ ಸೌಭಾಗ್ಯದಲಿ
ಸೃಷ್ಟಿಯೊಳು ಹೊರೆವ ಶ್ರೀಧರ ನಿಮ್ಮ ನಾಮ ||೯||
ಹರಿಸಿ ಸಂದೇಹ ಸಂಕಲ್ಪ ಬಾಧೆಗಳ
ಹರುಷ ಗತಿವೀವ ಹೃಷಿಕೇಶ ನಿಮ್ಮ ನಾಮ ||೧೦||
ಪರಬ್ರಹ್ಮದೊಳು ಬೆರೆಸಿ ಪರಮಪಾತಕ ಹರಿಸಿ
ಪರಮಗತಿಯೀವ ಪದ್ಮನಾಭ ನಿಮ್ಮ ನಾಮ ||೧೧||
ದಾರಿದ್ರ್ಯದುರಿತ ವಿಧ್ವಂಸನೆಯ ಮಾಡಿ ಧರೆಯೊಳು-
ದ್ಧರಿಸುವ ದಾಮೋದರ ನಿಮ್ಮ ನಾಮ ||೧೨||
ಸಕಲ ಪದವಿತ್ತ ಸುಖಸಾಧನವ ತೋರುತಿಹ
ಅಖಿಳದೊಳು ಸಂಕರುಷಣ ನಿಮ್ಮ ನಾಮ ||೧೩||
ವಾಸನೆಯ ಪೂರಿಸುತ ಭಾಷೆ ಪಾಲಿಸುತಿಹ
ಲೇಸಾಗೆ ಶ್ರೀವಾಸುದೇವ ನಿಮ್ಮ ನಾಮ ||೧೪||
ಪ್ರಾಣಪ್ರಿಯವಾಗಿ ಪ್ರಸನ್ನವಾಗುವ ಪೂರ್ಣ
ಪ್ರತ್ಯಕ್ಷವಿದು ಪ್ರದ್ಯುಮ್ನ ನಿಮ್ಮ ನಾಮ ||೧೫||
ಅವಮಾನ ಪರಿಹರಿಸಿ ಅನುಭವಾಮೃತ ಸುರಿಸಿ
ಅನುಕೂಲಾಗುವ ಅನಿರುದ್ಧ ನಿಮ್ಮ ನಾಮ ||೧೬||
ಪೂರ್ವಕರ್ಮವ ಹರಿಸಿ ಪೂರ್ಣಕಳೆಯೊಳು ಬೆರೆಸಿ
ಪುಣ್ಯಪದವೀವ ಪುರುಷೋತ್ತಮ ನಿಮ್ಮ ನಾಮ ||೧೭||
ಅಧ್ಯಾತ್ಮ ಸುಖವರಿಸಿ ಸಿದ್ಧಾಂತವನು ತೋರಿ
ಅಧ್ಯಕ್ಷವಾಗುವಾಧೋಕ್ಷಜ ನಿಮ್ಮ ನಾಮ ||೧೮||
ನರಜನ್ಮವನು ಹರಿಸಿ ಹರಿಭಕ್ತಿಯೊಳು ಬೆರೆಸಿ
ಅರುವು ಕುರುವ್ಹಿದ ನರಸಿಂಹ ನಿಮ್ಮ ನಾಮ ||೧೯||
ಅರ್ಚನೆಯ ಪ್ರಾರ್ಥನೆಯು ಪರಮಪೂಜೆಯನರಸಿ
ಅಚಲಪದವೀವ ಅಚ್ಯುತ ನಿಮ್ಮ ನಾಮ ||೨೦||
ಜನನ ಮರಣವನಳಿಸಿ ತನುಮನದೊಳು ಬೆರಿಸಿ
ಜನುಮ ಹರಿಸುವ ಜನಾರ್ಧನ ನಿಮ್ಮ ನಾಮ ||೨೧||
ಉಪಮೆಯ ರಹಿತ ವಸ್ತುವುಪಾಯದಲಿ ತೋರಿ
ಕೃಪೆಯಿಂದ ಹೊರೆವ ಉಪೇಂದ್ರ ನಿಮ್ಮ ನಾಮ ||೨೨||
ಹರಿಸಿ ಅಹಂಭಾವ ಆರಿಸಿ ಅನುಭವ ಪೂರ್ಣ
ಸುರಿಸುವ ಸುಖ ಶ್ರೀಹರಿ ನಿಮ್ಮ ನಾಮ ||೨೩||
ಕರಕಮಲವಿಟ್ಟು ಶಿರದಲಿ ಸದ್ಗೈಸುತಿಹ
ಕರುಣಾಳು ಮೂರುತಿ ಶ್ರೀಕೃಷ್ಣ ನಿಮ್ಮ ನಾಮ ||||೨೪||
ವೇದವಿಂಶತಿ ಸಾರ ಸಂಧ್ಯಾಯನದಿ
ಮಹಿಪತಿಯ ಹೊರೆವ ಶ್ರೀಗುರು ನಿಮ್ಮ ನಾಮ || ೨೫||
***
ಕಾಖಂಡಕಿ ಶ್ರೀ ಮಹಿಪತಿರಾಯರು
ಭಯ ನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ಪ
ಕ್ಲೇಶಪಾಶವು ಕತ್ತರಿಸಿ ದೋಷನಾಶವನು ಗೈಸಿ ಪೋಷಿಸುವ ಕೇಶವ ನಿಮ್ಮ ನಾಮ 1
ನರಕ ಘೋರದ ಘಟವೆಂಬ ನರಜನ್ಮದುರ್ಘಟ ತಾರಿಸುವ ನಾರಾಯಣ ನಿಮ್ಮ ನಾಮ 2
ಮದಮತ್ಸರವ ಜರಿಸಿ ಭೇದಾಭೇದವು ಹರಿಸಿ ಮಾಧವ ನಿಮ್ಮ ನಾಮ 3
ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ 4
ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ 5
ಮೊದಲು ಮೂವಿಧಿಯಗಳು ಜರಿಸಿ ಸದಮಲ ಪುಣ್ಯ ಪದವೀವ ಮಧುಸೂದನ ನಿಮ್ಮ ನಾಮ 6
ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ ಭಾವಭಕ್ತೀವ ತ್ರಿವಿಕ್ರಮ ನಿಮ್ಮ ನಾಮ 7
ವರ್ಮಧರ್ಮವನರಿಸಿ ಕರ್ಮಪಾಶವ ಹರಿಸಿ ಜನ್ಮ ತಾರಿಸುವ ವಾಮನ ನಿಮ್ಮ ನಾಮ 8
ಶ್ರೀಕರವನಿತ್ತು ಸಿರಿಸಕಲ ಸೌಭಾಗ್ಯದಲಿ ಸೃಷ್ಟಿಯೊಳು ಹೊರೆವ ಶ್ರೀಧರ ನಿಮ್ಮ ನಾಮ 9
ಹರಿಸಿ ಸಂದೇಹ ಸಂಕಲ್ಪ ಬಾಧೆಯಗಳು ಹರುಷ ಗತಿನೀವ ಹೃಷೀಕೇಶ ನಿಮ್ಮ ನಾಮ 10
ಪಾತಕ ಹರಿಸಿ ಪದ್ಮನಾಭ ನಿಮ್ಮ ನಾಮ 11
ದುರಿತ ವಿಧ್ವಂಸನಿಯ ಮಾಡಿ ಧರೆಯೊಳು ದ್ಧರಿಸುವ ದಾಮೋದರ ನಿಮ್ಮ ನಾಮ 12
ಸಕಲ ಪದವಿತ್ತ ಸುಖಸಾಧನವ ತೋರುತಿಹ್ಯ ಅಖಿಳದೊಳು ಸಂಕುರುಷಣ ನಿಮ್ಮ ನಾಮ 13
ವಾಸನೆಯು ಪೂರಿಸುತ ಭಾಷೆ ಪಾಲಿಸುತಿಹ ಲೇಸಾಗಿ ಶ್ರೀವಾಸುದೇವ ನಿಮ್ಮ ನಾಮ 14
ಪ್ರಾಣಪ್ರಿಯವಾಗಿ ಪ್ರಸನ್ನವಾಗುವ ಪೂರ್ಣ ಪ್ರತ್ಯಕ್ಷವಿದು ಪ್ರದ್ಯುಮ್ನ ನಿಮ್ಮ ನಾಮ 15
ಅನುಮಾನ ಪರಿಹರಿಸಿ ಅನುಭವಾಮೃತ ಸುರಿಸಿ ಅನಿರುದ್ಧ ನಿಮ್ಮ ನಾಮ 16
ಪೂರ್ವಕರ್ಮವ ಹರಿಸಿ ಪೂರ್ಣಕಳೆಯೊಳು ಬೆರೆಸಿ ಪುಣ್ಯಪದವೀವ ಪುರುಷೋತ್ತಮ ನಿಮ್ಮ ನಾಮ 17
ಅಧ್ಯಾತ್ಮ ಸುಖವರಿಸಿ ಸಿದ್ಧಾಂತವನು ತೋರಿ ಅಧ್ಯಕ್ಷವಾಗುವಾಧೋಕ್ಷಜ ನಿಮ್ಮ ನಾಮ 18
ನರಜನ್ಮವನು ಹರಿಸಿ ಹರಿಭಕ್ತಿಯೊಳು ಬೆರೆಸಿ ಅರುವು ಕುರ್ಹುವ್ಹಿಡಿದ ನರಸಿಂಹ ನಿಮ್ಮ ನಾಮ 19
ಅರ್ಚನೆಯು ಪ್ರಾರ್ಥನೆಯು ಪರಮಪೂಜೆಯನರಿಸಿ ಅಚ್ಯುತ ನಿಮ್ಮ ನಾಮ 20
ಜನನ ಮರಣವನಳಿಸಿ ತನುಮದೊಳು ಬೆರಿಸಿ ಜನುಮ ಹರಿಸುವ ಜನಾರ್ದನ ನಿಮ್ಮ ನಾಮ21
ಉಪಮೆಯ ರಹಿತ ವಸ್ತುವುಪಾಯದಲಿ ತೋರಿ ಕೃಪೆಯಿಂದ ಹೊರೆವ ಉಪೇಂದ್ರ ನಿಮ್ಮ ನಾಮ22
ಹರಿಸಿ ಅಹಂಭಾವ ಅರಿಸಿ ಅನುಭವ ಪೂರ್ಣ ಸುರಿಸುವ ಸುಖ ಶ್ರೀಹರಿ ನಿಮ್ಮ ನಾಮ 23
ಕರಕಮಲವಿಟ್ಟು ಶಿರದಲಿ ಸದ್ಗೈಸುತಿಹ ಕರುಣಾಳು ಮೂರುತಿ ಶ್ರೀಕೃಷ್ಣ ನಿಮ್ಮ ನಾಮ 24
ಸಾರ ಸಂಧ್ಯಾಯನದಿ ಮಹಿಪತಿಯ ಹೊರೆವ ಶ್ರೀಗುರು ನಿಮ್ಮ ನಾಮ 25
No comments:
Post a Comment