Wednesday 11 December 2019

ದತ್ತ ದತ್ತೆನಲು ಹತ್ತಿ ತಾ ಬಹನು ankita mahipati

ಮಾಂಡ್ ರಾಗ ಕೇರವಾ ತಾಳ

ದತ್ತ ದತ್ತೆನಲು ಹತ್ತಿ ತಾ ಬಹನು
ಚಿತ್ತದೊಳಗಾಗುವ ಮತ್ತೆ ತಾ ಶಾಶ್ವತನು
ದತ್ತ ಉಳ್ಳವನ ಹತ್ತಿಲೇ ಇಹನು
ವೃತ್ತಿ ಒಂದಾದರೆ ಹಸ್ತಗು(ಗೂ?)ಡುವನು ||೧||

ಎತ್ತ ನೋಡಿದರೆ ಮೊತ್ತವಾಗಿಹ ತಾಂ
ಉತ್ತಮೋತ್ತಮರನೆತ್ತುವ ತಾಯಿ ತಾ
ಅತ್ತಲಿತ್ತಾಗದೆ ಹತ್ತಿಲೆ ಸೂಸುತ
ಮುತ್ತಿನಂತಹನು ನೆತ್ತಿಲಿ ಭಾಸುತ ||೨||

ದತ್ತನೆಂದೆನಲು ಕತ್ತಲೆ ಪೋಗುದು
ಮೃತ್ಯು ಅಂಜುತಲಿ ಭೃತ್ಯನಾಗಿಹುದು
ದತ್ತನಿಂದಧಿಕ ಮತ್ತು ತಾ ಒಂದು
ಉತ್ತಮರಿಗೆ ತಾ ಸತ್ಯ ಭಾಸುದು ||೩||

ಒತ್ತಿ ಉನ್ಮನಿಯಾವಸ್ಥಿಯೊಳಾಡುವುದು
ಸ್ವಸ್ತಮನಾದರೆ ವಸ್ತು ಕೈಗೂಡುವದು
ಬಿತ್ತಿ ಮನ ಗುರುಭಕ್ತಿ ಮಾಡುವುದು
ದತ್ತ ತನ್ನೊಳು ತಾನೆವೆ ಭಾಸುವುದು ||೪||

ದತ್ತ ದತ್ತೆಂದು ತಾ ಅರ್ತ ಮಹಿಪತಿಯ
ಬೆರ್ತ ನೋಡಿದ ಮನವು ಸುಮೂರ್ತಿಯು
ಮರ್ತ್ಯದೊಳಿದುವೆ ಸುಖ ವಿಶ್ರಾಂತಿಯು
ಮರ್ತು ಹೋಗುವುದು ಮಾಯದ ಭ್ರಾಂತಿಯು ||೫||
********

No comments:

Post a Comment