Wednesday 11 December 2019

ಇಂದು ಕೂಡಿದೆವು ನಿಜ ಇಂದಿರೇಶನ ankita mahipati

ಇಂದು ಕೂಡಿದೆವು ನಿಜ
ಇಂದಿರೇಶನ  ಇಂದು ಕೂಡಿದೆವು  ||ಧ್ರುವ||

ಇಂದೆ ಕೂಡಿದೆವಯ್ಯ
ತಂದೆ ಸದ್ಗುರು ನಿಮ್ಮ
ಎಂದೆಂದಗಲದ್ಹಾಂಗ ದ್ವಂದ್ವಂ ಶ್ರೀಪಾದ ||೧||

ಕಂಡು ಪಾರಣಿಗಂಡು
ಪುಣ್ಯಗೈಸಿತು ಪ್ರಾಣ
ಧನ್ಯಗೈಸಿತು ಜೀವನ ಉನ್ಮನವಾಗಿ ||೨||

ಇಂದು ಕೂಡಿದೆವು
ಬಂಧುಬಳಗ ನಮ್ಮ
ಕಂದ ಮಹಿಪತಿಸ್ವಾಮಿಯಾ ಸಂದಿಸಿ ಪಾದ ||೩||
********



No comments:

Post a Comment