Tuesday, 5 October 2021

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ ankita indiresha ODI ODI BA ANKADOLADO KOOSE BA



ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ ಪ

ನೋಡುವೆ ನಿನ್ನ ರಾಮರ ಮುಖದಿ ಕೂಡಿ ಕರುಣಿಯೆ ಬಾ ಅ.ಪ.

ಚೆಂಡು ಕೊಡುವೆನು ಬಾ ಗೋಲಿಗುಂಡು ಕೊಡುವೆನು ಬಾದುಂಡು ಕರದೊಳ್ ಗುಂಡು ಬಿಂದುಲಿ ಉಂಗುರನೀಡುವೆ ಬಾ 1

ಬೆಣ್ಣೆ ಕೊಡುವೆನು ಬಾ ಬಾಳೆಹಣ್ಣು ಕೊಡುವೆನು ಬಾಸಣ್ಣ ಸಣ್ಣ ಹೆಜ್ಜೆನಿಕ್ಕುತ ಮನ್ಮಥಪಿತನೆ ಬಾ 2

ನಾರಿವತ್ಸೆ ಬಾ ಮುತ್ತಿನ ಹಾರ ಹಾಕುವೆ ಬಾಪಾರಿಜಾತ ಮುಡಿಸಿದ ರುಕ್ಮಿಣಿಧೀರ ಕೃಷ್ಣನೆ ಬಾ 3

ಮುರಳೀಧರನೆ ಬಾ ಮುಂಗುರಗಳ ಭೂಷಿತ ಬಾಪರಿಪರಿವಸ್ತ್ರವನಿಟ್ಟು ನೋಡುವೆ ಮರಳಿ ಮರಳಿ ಬಾ 4

ನಂದನ ಕಂದನೆ ಬಾ ಮನಕಾನಂದಪಡಿಸುತ ಬಾನಿಂದಿರಲಾರೆ ನಿನ್ನನು ನೋಡದೆ ಇಂದಿರೇಶನೆ ಬಾ 5
****


No comments:

Post a Comment