Tuesday, 5 October 2021

ನೀನೇ ಅಚ್ಯುತ ನೀನೇ ಮಾಧವ ಹರಿ ಗೋವಿಂದನು purandara vittala NEENE ACHYUTA NEENE MAADHAVA HARI GOVINDANU




ನೀನೇ ಅಚ್ಯುತ ನೀನೇಮಾಧವ|ಹರಿಗೋವಿಂದನು ನೀನೆ ||
ನೀನೆಗತಿಯೆಂದು ನಂಬಿದ ದಾಸಗೆ |ಅಭಯಕೊಟ್ಟಾತನು ನೀನೆ ಪ

ಜಲದೊಳು ಪೊಕ್ಕು ಮೈನಡುಗಿಸಿ ಭಾರವ |ತಳೆದಾತನು ನೀನೆ ||ಇಳೆಯ ಕದ್ದ ಸುರನ ದಾಡೆಯಿಂದ ಸೀಳಿ ಕಂಬ |ದೊಳು ಉದ್ಭವಿಸಿದೆ ನೀನೆ 1

ಬಲಿಯ ಪಾತಾಳಕೆ ತುಳಿದೆಯೊ ನೀನು ಕೊ-|ಡಲಿಯ ಪಿಡಿದವನು ನೀನೆ ||ಜಲಧಿಯ ದಾಟಿ-ಅಸುರರ ಕಡಿದು |ಲಲನೆಯ ತಂದಾತ ನೀನೆ 2

ಗೊಲ್ಲರ ಮನೆಯಲಿ ಬೆಣ್ಣೆಯ ಕದ್ದು |ಕಳ್ಳನೆನಿಸಿದವ ನೀನೆ ||ಬಲ್ಲಿದತ್ರಿಪುರದಿ ಬತ್ತಲೆ ನಿಂತು |ಒಳ್ಳೆ ಹಯವ ಹತ್ತಿದೆ ನೀನೆ 3

ಪಾಂಡವರಿಗತಿ ಪ್ರಿಯನೆಂದೆನಿಸಿದ |ಪುಂಡರೀಕಾಕ್ಷನು ನೀನೆ |ಪುಂಡಲೀಕ ಪುರುಷೋತ್ತಮ ಮೂರುತಿ |ಪುರಂದರವಿಠಲನು ನೀನೆ 4
***

pallavi

nInE acyuta nInE mAdhava harigOvindanu nIne nIne gatiyendu nambida dAsage abhaya koTTAtanu nIne

caraNam 1

jaladoLu pokku mai naDugisi bhArava taLedAtanu nIne
iLeya kaddasurara tADeyinda sILi kambadoLu udbhaviside nIne

caraNam 2

baliya pAtALake tuLideyo nInu koDaliya piDidavanu nIne
jaladhiya tADi asurara kaDidu lalaneya tandAta nIne

caraNam 3

gollara meneyali beNNeya kaddu kaLLanenisidava nIne
ballida tripuradi battale nintu oLLe hayava hattide nIne

caraNam 4

pANDavarigati priyanendenisida puNDarIkAkSanu nIne
puNDalIka puruSOttama mUruti purandara viTTalanu nIne
***

No comments:

Post a Comment