CLICK-> INDEX ದೇವರನಾಮ ಕೇಳಿ ಕಲಿಯಲು ಲಿಂಕ್ LINKS TO LEARN DEVARANAMA
or just scroll down for other devaranama
ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು ||
ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ
ನಾರಾಯಣ ನಿಮ್ಮ ನಾಮ ತಾಳಿ ಪದಕವು
ಮಾಧ್ವ ನಿಮ್ಮ ನಾಮ ಸುರಗೆ ಸಂಪಿಗೆ ಮೊಗ್ಗು
ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧||
ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಗಳು
ಮಧುಸೂದನ ನಿಮ್ಮ ನಾಮ ಮಾಣಿಕ್ಯದ ಹರಳು
ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗಮುರುಗಿಯು
ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨||
ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ
ಹೃಷಿಕೇಶ ನಿಮ್ಮ ನಾಮ ಕಡಗ ಗೆಜ್ಜೆಯು
ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಯು
ದಾಮೋದರ ನಿಮ್ಮ ನಾಮ ರತ್ನದ ಪದಕವು ||೩||
ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು
ವಾಸುದೇವ ನಿಮ್ಮ ನಾಮ ಒಲಿದ ತೋಡೆ
ಪ್ರದ್ಯುಮ್ನ ನಿಮ್ಮ ನಾಮ ಹಸ್ತಕಂಕಣ ಬಳೆ
ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು ||೪||
ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ
ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ
ನಾರಸಿಂಹ ನಿಮ್ಮ ನಾಮ ಚೌರಿ ರಾಗಟಿ ಗೊಂಡ್ಯ
ಅಚ್ಯುತ ನಿಮ್ಮ ನಾಮ ಮುತ್ತಿನ ಬೊಟ್ಟು ||೫||
ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ
ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು
ಶ್ರೀಹರಿ ನಿಮ್ಮ ನಾಮ ಕಂಚು ಅಂಕಿಯ ತುಳಸಿ
ಶ್ರೀಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು ||೬||
ಸರಸಿಜಾಕ್ಷ ನಿಮ್ಮ ನಾಮ ಅರಸಿನ ಎಣ್ಣೆ ಹಚ್ಚಿ
ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು
ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವು
ನಿಲುವುಗನ್ನಡಿಯಲಿ ಲಲನೆಯ ತೋರಿಸುತ ||೭||
***
Pallavi
Srī Mahālakṣmiya alaṅkarisi karedaru ||
Stanza 1
Kēśava nimma nāma māṅgalyasūtra tāḷi
Nārāyaṇa nimma nāma tāḷi padakavu
Mādhva nimma nāma surage sampige moggu
Gōvinda nimma nāma gōdhiya saravu || 1 ||
Stanza 2
Viṣṇuve nimma nāma ratna kuṇḍalagaḷu
Madhusūdana nimma nāma māṇikyada haraḷu
Trivikrama nimma nāma vaṅki nāgamurugiyu
Vāmana nimma nāma ōle ēkāvaḷiyu || 2 ||
Stanza 3
Srīdhara nimma nāma oḷḷe muttina hāra
Hr̥ṣikēśa nimma nāma kaḍaga gejjeyu
Padmanābha nimma nāma muttinaḍḍikeyu
Dāmōdara nimma nāma ratnada padakavu || 3 ||
Stanza 4
Saṅkarṣaṇa nimma nāma vaṅki tōḷāyitu
Vāsudēva nimma nāma olida tōḍe
Pradyumna nimma nāma hastakaṅkaṇa baḷe
Aniruddha nimma nāma mukura bulāku || 4 ||
Stanza 5
Puruṣōttama nimma nāma hosa muttina mūguti
Adhōkṣaja nimma nāma candra sūrya
Nārasiṁha nimma nāma cauri rāgaṭi goṇḍya
Acyuta nimma nāma muttina boṭṭu || 5 ||
Stanza 6
Janārdana nimma nāma jariya pītāmbara
Upēndra nimma nāma kaḍaga gejjeyu
Srīhari nimma nāma kañcu aṅkiya tuḷasi
Srīkr̥ṣṇa nimma nāma naḍuvinoḍyāṇavu || 6 ||
Stanza 7
Sarasijākṣa nimma nāma arasina eṇṇe hacci
Paṅkajākṣa nimma nāma kuṅkuma kāḍigeyu
Purandara viṭhala nimma nāma sarvābharaṇavu
Niluvugannaḍiyali lalaneya tōrisuta || 7 ||
***
Pronunciation Guide
Long Vowels: Letters with a bar (ā, ē, ī, ō, ū) should be held for two beats (e.g., nāma sounds like "naama").
Retroflex Consonants: Letters with a dot below (ṭ, ḍ, ṇ, ṣ,ḷ) require curling the tongue back to touch the roof of the mouth.
The 'h' sound: 'Hr̥' in Hr̥ṣikēśa is a soft vocalic 'r' sound; 'ṁ' is a nasal hum; 'ḥ' (if used) is a soft echo.
Aspiration: Consonants followed by 'h' (like kh, th, ph) are pronounced with a distinct puff of air.
Sibilants: 'ś' is a soft "sh" as in sugar, while 'ṣ' is a deeper "sh" with the tongue curled back.
***
ಶ್ರೀ ಪುರಂದರದಾಸರು ವಿರಚಿಸಿದ ಈ ಸುಂದರವಾದ ಕೃತಿಯಲ್ಲಿ, ಭಗವಂತನ ಚತುರ್ವಿಂಶತಿ (೨೪) ನಾಮಗಳನ್ನು ಬಳಸಿ ಮಹಾಲಕ್ಷ್ಮಿಗೆ ಅಲಂಕಾರ ಮಾಡಿರುವ ಅಪರೂಪದ ವರ್ಣನೆ ಇದೆ.
ಸಾರಾಂಶ (Summary)
ಈ ಕೀರ್ತನೆಯಲ್ಲಿ ಪುರಂದರದಾಸರು ಸೌಂದರ್ಯ ಮತ್ತು ಭಕ್ತಿಯ ಅದ್ಭುತ ಸಂಗಮವನ್ನು ತಂದಿದ್ದಾರೆ. ಮಹಾಲಕ್ಷ್ಮಿಯನ್ನು ಶೃಂಗರಿಸಲು ಅವರು ಲೋಹ ಅಥವಾ ರತ್ನದ ಆಭರಣಗಳಿಗಿಂತ ಹೆಚ್ಚಾಗಿ ಭಗವಂತನ ಪವಿತ್ರ ನಾಮಗಳನ್ನೇ ಆಭರಣಗಳನ್ನಾಗಿ ಬಳಸಿದ್ದಾರೆ. ಕೇಶವನಿಂದ ಕೃಷ್ಣನವರೆಗೆ ಪ್ರತಿಯೊಂದು ನಾಮವೂ ಒಂದೊಂದು ವಿಶಿಷ್ಟ ಆಭರಣವಾಗಿ ಲಕ್ಷ್ಮಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೊನೆಯಲ್ಲಿ, ಪುರಂದರ ವಿಠಲನ ನಾಮವೇ ಸರ್ವಾಭರಣವಾಗಿ, ಆ ಲಲನೆಯು ಕನ್ನಡಿಯ ಮುಂದೆ ನಿಂತು ತನ್ನ ರೂಪವನ್ನು ನೋಡಿ ಆನಂದಿಸುವ ಚಿತ್ರಣ ಇಲ್ಲಿದೆ.
ಪೀಠಿಕೆ: ಭಕ್ತರು ಶ್ರೀ ಮಹಾಲಕ್ಷ್ಮಿಯನ್ನು ಭಗವಂತನ ದಿವ್ಯ ನಾಮಗಳೆಂಬ ಆಭರಣಗಳಿಂದ ಶೃಂಗರಿಸಿ ಅತ್ಯಂತ ಭಕ್ತಿಯಿಂದ ಆಹ್ವಾನಿಸಿದರು.
ಪದ್ಯ ೧: ಮಹಾಲಕ್ಷ್ಮಿಯು ಕೇಶವ ಎಂಬ ಹೆಸರನ್ನು ಮಾಂಗಲ್ಯಸೂತ್ರವಾಗಿ, ನಾರಾಯಣ ಎಂಬ ಹೆಸರನ್ನು ಪದಕವಾಗಿ, ಮಾಧವ ಎಂಬ ನಾಮವನ್ನು ಸುಗಂಧಿತ ಹೂವುಗಳಾಗಿ ಮತ್ತು ಗೋವಿಂದ ಎಂಬ ಹೆಸರನ್ನು ಬಂಗಾರದ ಸರವಾಗಿ ಧರಿಸಿದ್ದಾಳೆ.
ಪದ್ಯ ೨: ವಿಷ್ಣು ಎಂಬ ನಾಮವು ಅವಳ ರತ್ನದ ಕುಂಡಲಗಳಾದರೆ, ಮಧುಸೂದನ ಎಂಬ ನಾಮವು ಆ ಕುಂಡಲಗಳಲ್ಲಿರುವ ಮಾಣಿಕ್ಯದ ಹರಳುಗಳಾಗಿವೆ; ಹಾಗೆಯೇ ತ್ರಿವಿಕ್ರಮ ಮತ್ತು ವಾಮನ ನಾಮಗಳು ಅವಳ ತೋಳಬಳೆ ಮತ್ತು ಕಿವಿಯ ಓಲೆಗಳಾಗಿ ಶೋಭಿಸುತ್ತಿವೆ.
ಪದ್ಯ ೩: ಶ್ರೀಧರ ಎಂಬ ನಾಮವು ಅವಳ ಮುತ್ತಿನ ಹಾರವಾಗಿದೆ, ಹೃಷಿಕೇಶ ಎಂಬ ನಾಮವು ಅವಳ ಕೈಕಡಗ ಮತ್ತು ಗೆಜ್ಜೆಗಳಾಗಿ ನಾದ ಮಾಡುತ್ತಿವೆ, ಹಾಗೂ ಪದ್ಮನಾಭ ಮತ್ತು ದಾಮೋದರ ನಾಮಗಳು ಅವಳ ಕಂಠಹಾರ ಮತ್ತು ರತ್ನದ ಪದಕಗಳಾಗಿವೆ.
ಪದ್ಯ ೪: ಸಂಕರ್ಷಣ ಮತ್ತು ವಾಸುದೇವ ಎಂಬ ನಾಮಗಳು ಅವಳ ತೋಳುಗಳಿಗೆ ಧರಿಸುವ ವಂಕಿ ಮತ್ತು ತೋಡೆಗಳಾಗಿವೆ, ಪ್ರದ್ಯುಮ್ನ ನಾಮವು ಅವಳ ಹಸ್ತಕಂಕಣ ಬಳೆಗಳಾದರೆ, ಅನಿರುದ್ಧ ನಾಮವು ಅವಳ ಮೂಗಿನ ಹೊಳೆಯುವ ಬುಲಾಕಾಗಿದೆ.
ಪದ್ಯ ೫: ಪುರುಷೋತ್ತಮ ಎಂಬ ನಾಮವು ಅವಳ ಮುತ್ತಿನ ಮೂಗುತಿಯಾಗಿದೆ, ಅಧೋಕ್ಷಜ ನಾಮವು ತಲೆಯ ಮೇಲಿರುವ ಚಂದ್ರ-ಸೂರ್ಯರಂತಿದ್ದರೆ, ನರಸಿಂಹ ಮತ್ತು ಅಚ್ಯುತ ನಾಮಗಳು ಅವಳ ಜಡೆಯ ಶೃಂಗಾರ ಮತ್ತು ಹಣೆಯ ಮುತ್ತಿನ ಬೊಟ್ಟಾಗಿವೆ.
ಪದ್ಯ ೬: ಜನಾರ್ದನ ಎಂಬ ನಾಮವು ಅವಳು ಉಟ್ಟಿರುವ ಜರಿಯ ಪೀತಾಂಬರವಾಗಿದೆ, ಉಪೇಂದ್ರ ಮತ್ತು ಶ್ರೀಹರಿ ನಾಮಗಳು ಅವಳ ಗೆಜ್ಜೆ ಮತ್ತು ತುಳಸಿ ಮಾಲೆಯಾಗಿವೆ, ಹಾಗೂ ಶ್ರೀಕೃಷ್ಣ ಎಂಬ ನಾಮವು ಅವಳ ಸೊಂಟದ ಒಡ್ಯಾಣವಾಗಿ ಪ್ರಕಾಶಿಸುತ್ತಿದೆ.
ಪದ್ಯ ೭: ಸರಸಿಜಾಕ್ಷ ಮತ್ತು ಪಂಕಜಾಕ್ಷ ಎಂಬ ನಾಮಗಳು ಅವಳ ಮಂಗಲ ಸ್ನಾನದ ಅರಿಶಿನ ಮತ್ತು ಕಣ್ಣಿನ ಕಾಡಿಗೆಯಾಗಿವೆ; ಅಂತಿಮವಾಗಿ ಪುರಂದರ ವಿಠಲ ಎಂಬ ನಾಮವೇ ಸಕಲ ಆಭರಣಗಳಾಗಿ ಲಕ್ಷ್ಮಿಯು ನಿಲುವುಗನ್ನಡಿಯ ಮುಂದೆ ತನ್ನ ಸೌಂದರ್ಯವನ್ನು ಕಂಡು ಆನಂದಿಸುತ್ತಿದ್ದಾಳೆ.
***
In this beautiful composition by Sri Purandara Dasa, there is a rare and exquisite description where Goddess Mahalakshmi is adorned using the twenty-four sacred names (Chaturvimshati Nama) of the Lord.
Summary
In this kirtana, Purandara Dasa brings forth a wonderful union of beauty and devotion. To decorate Mahalakshmi, he uses the holy names of the Lord as ornaments rather than jewels made of metal or stone. From Keshava to Krishna, each name enhances Lakshmi’s beauty as a specific, unique ornament. In the conclusion, the name of Purandara Vitthala becomes the "all-encompassing ornament," and there is a vivid portrayal of the Goddess standing before a mirror, admiring her own divine form with joy.
Full Sentence Meaning
Introduction: The devotees invited Sri Mahalakshmi with great devotion after adorning her with the divine names of the Lord as her jewelry.
Stanza 1: Mahalakshmi wears the name Keshava as her sacred wedding thread (Mangalyasutra), the name Narayana as a pendant, the name Madhava as fragrant flowers, and the name Govinda as a golden chain.
Stanza 2: The name Vishnu serves as her gem-studded earrings, while the name Madhusudana represents the rubies set within those earrings; similarly, the names Trivikrama and Vamana shine as her armlets and elegant ear-studs.
Stanza 3: The name Shridhara is her necklace of pearls, the name Hrishikesha resonates as her bracelets and anklets, and the names Padmanabha and Damodara act as her choker and gemstone locket.
Stanza 4: The names Sankarshana and Vasudeva are the arm-bands and heavy bangles worn on her arms, the name Pradyumna represents her wrist-cuffs and bangles, and the name Aniruddha is her sparkling nose-ring (Bulaku).
Stanza 5: The name Purushottama is her pearl nose-stud, the name Adhokshaja is like the sun and moon ornaments worn on the head, and the names Narasimha and Achyuta serve as the decorations for her braided hair and the pearl bindi on her forehead.
Stanza 6: The name Janardana is the golden-bordered silk robe (Pitambara) she wears, the names Upendra and Srihari are her anklets and Tulsi beads, and the name Srikrishna radiates as the golden belt around her waist.
Stanza 7: The names Sarasijaksha and Pankajaksha serve as the auspicious turmeric and eye-kohl used in her ritual bath; finally, the name Purandara Vitthala becomes the summation of all ornaments as Lakshmi stands before a full-length mirror, admiring her own beauty with delight.
***
Shri mahalakshmiya alankarisi karedaru ||
Keshava nimma nama mangalyasutra tali
narayana nimma nama tali padakavu
madhava nimma nama surage sampige moggu
govinda nimma nama godhiya saravu ||1||
Vishnuve nimma nama ratna kundalagalu
madhusudana nimma nama manikyada haralu
trivikrama nimma nama vanki nagamurugiyu
vamana nimma nama Ole ekavaliyu ||2||
Shridhara nimma nama olle muttina hara
hrushikesha nimma nama kadaga gejjeyu
padmanabha nimma nama muttinaddikeyu
damodara nimma nama ratnada padakavu ||3||
Samkarshana nimma nama vanki tolayitu
vasudeva nimma nama olida tode
pradyumna nimma nama hastakankana bale
aniruddha nimma nama mukura bulaku ||4||
Purushottama nimma nama hosa muttina muguti
adhokshaja nimma nama chandra surya
narasimha nimma nama chouri ragati gondya
achyuta nimma nama muttina bottu ||5||
Janardana nimma nama jariya pitambara
upendra nimma nama kadaga gejjeyu
shrihari nimma nama kanchu ankiya tulasi
shrikrushna nimma nama naduvinodyanavu ||6||
Sarasijaksha nimma nama arasina enne hachchi
pankajaksha nimma nama kumkuma kadigeyu
purandara vithala nimma nama sarvabharanavu
niluvugannadiyali lalaneya torisuta ||7||
***
shrI mahAlakShmiya alaMkarisi karedaru ||
kEshava nimma nAma mAMgalyasUtra tALi
nArAyaNa nimma nAma tALi padakavu
mAdhva nimma nAma surage saMpige moggu
gOviMda nimma nAma gOdhiya saravu ||1||
viShNuve nimma nAma ratna kuMDalagaLu
madhusUdana nimma nAma mANikyada haraLu
trivikrama nimma nAma vaMki nAgamurugiyu
vAmana nimma nAma Ole EkAvaLiyu ||2||
shrIdhara nimma nAma oLLe muttina hAra
hRuShikEsha nimma nAma kaDaga gejjeyu
padmanAbha nimma nAma muttinaDDikeyu
dAmOdara nimma nAma ratnada padakavu ||3||
saMkarShaNa nimma nAma vaMki tOLAyitu
vAsudEva nimma nAma olida tODe
pradyumna nimma nAma hastakaMkaNa baLe
aniruddha nimma nAma mukura bulAku ||4||
puruShOttama nimma nAma hosa muttina mUguti
adhOkShaja nimma nAma chaMdra sUrya
nArasiMha nimma nAma chouri rAgaTi goMDya
achyuta nimma nAma muttina boTTu ||5||
janArdana nimma nAma jariya pItAMbara
upEMdra nimma nAma kaDaga gejjeyu
shrIhari nimma nAma kaMchu aMkiya tuLasi
shrIkRuShNa nimma nAma naDuvinoDyANavu ||6||
sarasijAkSha nimma nAma arasina eNNe hachchi
paMkajAkSha nimma nAma kuMkuma kADigeyu
puraMdara viThala nimma nAma sarvAbharaNavu
niluvugannaDiyali lalaneya tOrisuta ||7||
***
ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು ||
ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ
ನಾರಾಯಣ ನಿಮ್ಮ ನಾಮ ತಾಳಿ ಪದಕವು
ಮಾಧವ ನಿಮ್ಮ ನಾಮ ಸುರಗೆ ಸಂಪಿಗೆ ಮೊಗ್ಗು
ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧||
ವಿಷ್ಣುವೇ ನಿಮ್ಮ ನಾಮ ರತ್ನ ಕುಂಡಲಗಳು
ಮಧುಸೂಧನ ನಿಮ್ಮ ನಾಮ ಮಾಣಿಕ್ಯದ ಹರಳು
ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗಮುರುಗಿಯು
ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨||
ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ
ಹೃಷಿಕೇಶ ನಿಮ್ಮ ನಾಮ ಕಡಗ ಗೆಜ್ಜೆಯು
ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಯು
ದಾಮೋದರ ನಿಮ್ಮ ನಾಮ ರತ್ನದ ಪದಕವು ||೩||
ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು
ವಾಸುದೇವ ನಿಮ್ಮ ನಾಮ ಒಲಿದ ತೋಡೆ
ಪ್ರದ್ಯುಮ್ನ ನಿಮ್ಮ ನಾಮ ಹಸ್ತಕಂಕಣ ಬಳೆ
ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು ||೪||
ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ
ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ
ನಾರಸಿಂಹ ನಿಮ್ಮ ನಾಮ ಚೌರಿ ರಾಗಟಿ ಗೊಂಡ್ಯ
ಅಚ್ಯುತ ನಿಮ್ಮ ನಾಮ ಮುತ್ತಿನ ಬೊಟ್ಟು ||೫||
ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ
ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು
ಶ್ರೀಹರಿ ನಿಮ್ಮ ನಾಮ ಕಂಚು ಅಂಕಿಯ ತುಳಸಿ
ಶ್ರೀಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು ||೬||
ಸರಸಿಜಾಕ್ಷ ನಿಮ್ಮ ನಾಮ ಅರಸಿನ ಎಣ್ಣೆ ಹಚ್ಚಿ
ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು
ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವು
ನಿಲುವುಗನ್ನಡಿಯಲಿ ಲಲನೆಯ ತೋರಿಸುತ ||೭||
****
ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ
ನಾರಾಯಣ ನಿಮ್ಮ ನಾಮ ತಾಳಿ ಪದಕವು
ಮಾಧವ ನಿಮ್ಮ ನಾಮ ಸುರಗೆ ಸಂಪಿಗೆ ಮೊಗ್ಗು
ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧||
ವಿಷ್ಣುವೇ ನಿಮ್ಮ ನಾಮ ರತ್ನ ಕುಂಡಲಗಳು
ಮಧುಸೂಧನ ನಿಮ್ಮ ನಾಮ ಮಾಣಿಕ್ಯದ ಹರಳು
ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗಮುರುಗಿಯು
ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨||
ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ
ಹೃಷಿಕೇಶ ನಿಮ್ಮ ನಾಮ ಕಡಗ ಗೆಜ್ಜೆಯು
ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಯು
ದಾಮೋದರ ನಿಮ್ಮ ನಾಮ ರತ್ನದ ಪದಕವು ||೩||
ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು
ವಾಸುದೇವ ನಿಮ್ಮ ನಾಮ ಒಲಿದ ತೋಡೆ
ಪ್ರದ್ಯುಮ್ನ ನಿಮ್ಮ ನಾಮ ಹಸ್ತಕಂಕಣ ಬಳೆ
ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು ||೪||
ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ
ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ
ನಾರಸಿಂಹ ನಿಮ್ಮ ನಾಮ ಚೌರಿ ರಾಗಟಿ ಗೊಂಡ್ಯ
ಅಚ್ಯುತ ನಿಮ್ಮ ನಾಮ ಮುತ್ತಿನ ಬೊಟ್ಟು ||೫||
ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ
ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು
ಶ್ರೀಹರಿ ನಿಮ್ಮ ನಾಮ ಕಂಚು ಅಂಕಿಯ ತುಳಸಿ
ಶ್ರೀಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು ||೬||
ಸರಸಿಜಾಕ್ಷ ನಿಮ್ಮ ನಾಮ ಅರಸಿನ ಎಣ್ಣೆ ಹಚ್ಚಿ
ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು
ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವು
ನಿಲುವುಗನ್ನಡಿಯಲಿ ಲಲನೆಯ ತೋರಿಸುತ ||೭||
****
No comments:
Post a Comment