ಕಲ್ಯಾಣಾಧ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ
ನಾನೇನ ಮಾಡಿದೆನೊ ವೆಂಕಟ ರಮಣ,
ನೀ ಎನ್ನ ಕಾಯಬೇಕೋ||2||
ಮಾನಾಭಿಮಾನವು ನಿನ್ನದು ಎನಗೇನು ||2||
ದೀನ ರಕ್ಷಕ ತಿರುಪತಿಯ ಶ್ರೀವೆಂಕಟರಮಣ ||ನಾನೇನ||
ರಕ್ಕಸ ಸೂದನನೇ ಕೇಳು,
ಧ್ರುವರಾಯ ಚಿಕ್ಕ ವನಲ್ಲವೇನು||2||
ಉಕ್ಕಿ ಬರುವ ಗರ್ವ ಮಾಡಿದ ಅಜಮಿಳ||2||
ನಿನ್ನಅಕ್ಕನ ಮಗನೇನೋ.... ವೆಂಕಟ ರಮಣ ||ನಾನೇನ||
ಕರಿರಾಜ ಕಳುಹಿಸಿದನೆ ,
ದ್ರೌಪದಿ ದೇವಿ ಬರೆದೋಲೆ ಕಳುಹಿಸಿದಳೇ ||2||
ಹರುಷದಿಂದಲಿ ಋಷಿಪತ್ನಿಯ ಶಾಪವ||2||
ಪರಿಹರಿಸಿದೆಯಲ್ಲವೋ... ವೆಂಕಟ ರಮಣ ||ನಾನೇನ||
ಒಪ್ಪಿಡಿಯವಲಕ್ಕಿಯ,
ತಂದವನಿಗೆ ಒಪ್ಪುವಂತೆ ಕೊಡಲಿಲ್ಲವೇನೋ||2||
ಸರ್ಪಶಯನ ಶ್ರೀಪುರಂದರವಿಠಲ||2||
ಅಪ್ರಮೇಯ ಎನ್ನ ಕಾಯೋ...
ವೆಂಕಟರಮಣ ||ನಾನೇನ||
***
Revathi - Aadi.
P: nAnEnu mADidenO venkaTaramaNA nInenna salahabEku krSNA
A: mAnAbhimAnavu ninagide enagillA
dInarakSaka svAmi tirupati venkaTaramaNa
C1: karirAja karesidane draupadi dEvi baredoLe kaLisidaLe
Harushadindali rshi patniya shApava pariharideyallo he swami
2: oppiDi avalakkiya tandavanige oppikoTTeyO bhAgyava
sarpa shayana shrI purandara viThalane aprameya salahO venkaTarAya
***
Meaning:
P: O Vennkataramana what (wrong) have I done, you must protect me
A: It is you who has arrogance(abhimAna) and pride (mAna); I dont
O protector of those in need, tirupati venkataramaNa
C1: Did the elephant king send for you? Did Draupadi dEvi write a letter (Ole) to you
Happily you ended the curse on the wife of king of rshis ....what wrong I have done
C2: you blessed the person who brought to you a fistful of puffed rice
O the one rests on a snake, purandaravithala, uneqalled one, (please) look after me O venkatarAya
***
No comments:
Post a Comment