Friday 27 December 2019

ಮಾನಾಭಿಮಾನವಿಲ್ಲವೇ ಮಹಲಕ್ಷ್ಮೀ ankita tulasi

by ತುಳಸೀರಾಮದಾಸರು
ಮಾನಾಭಿಮಾನವಿಲ್ಲವೇ | ಮಹಲಕ್ಷ್ಮೀ ನಿನಗೆ ಪ

ಹೀನ ಜನಂಗಳ ಬೇಡುತ ನಿರುತವುಹೀನ ವೃತ್ತಿಯಿಂದೋಡುತ ತಿರುಗುವೆ 1

ದೀನಾವನ ಬಿರುದೇನಾಯಿತೋ ಶ್ರೀದಾನಿ ನಿನ ನಂಬಿದ ದಾಸನ ವಿಷಯದಿ 2

ಜಾನಕಿ ಶ್ರೀ ರಘುನಾಯಕಿ ತವಪದಧ್ಯಾನವು ನನಗೆ ನಿಧಾನವು ಲಕುಮೀ 3

ಹೇಮಕುಧರ ಧಾಮೇಶ್ವರಿ ತುಲಸಿರಾಮದಾಸನ ಸಂರಕ್ಷಣೆ ಮಾಡುವ 4
********

No comments:

Post a Comment