Friday 27 December 2019

ಯಾತಕೆ ಕೃಪೆಮಾಡದೆ ಯಿರುತಿಹೆ ankita tulasi

by ತುಳಸೀರಾಮದಾಸರು
ಯಾತಕೆ ಕೃಪೆಮಾಡದೆ ಯಿರುತಿಹೆ ಸಿರಿಯೇಪೀತಾಂಬರಧರ ತರುಣಿಯೆ ಪ

ಪಾತಕಹಾರಿಣಿ ಭಾವಜನನೀಭಕ್ತ ಕುಟುಂಬಿನಿಭವಭಯ ನಾಶಿನಿ 1

ದಾರಿದ್ರ್ಯಾಂಬುಧಿ ತರುಣೋಪಾಯವುತೋರಿಸು ರಘುಕುಲದೊರೆ ಸುಪ್ರಿಯಳೆ 2

ರತ್ನಾಭರಣಯುಕ್ತ ಸುಗಾತ್ರೇರತ್ನಾಕರಸುತೇ ರಾಜೀವಾಲಯೇ 3

ಹೇಮಭೂಧರ ಸ್ವಾಮಿನಿ ತುಲಸೀರಾಮದಾಸ ಸುಕ್ಷೇಮವು ನಿನ್ನದು 4
*******

No comments:

Post a Comment