Tuesday, 19 November 2019

ಹ್ಯಾಂಗಾದರು ದಾಟಿಸೊ ಭವಾಬ್ಧಿಯ ankita prasannavenkata

by ಪ್ರಸನ್ನವೆಂಕಟದಾಸರು
ಹ್ಯಾಂಗಾದರು ದಾಟಿಸೊ ಭವಾಬ್ಧಿಯಹ್ಯಾಂಗಾದರು ದಾಟಿಸೊ ಪ.

ಗಂಗಾಜನಕನಾ ನಿನ್ನವನೆಂದುಹ್ಯಾಂಗಾದರು ದಾಟಿಸೊ ಅ.ಪ.

ನಗುತ್ತಾದರು ಉಂಡೆ ಅಳುತ್ತಾದರು ಉಂಡೆಬಗೆ ಬಗೆ ದುರ್ಜನ್ಮ ಸುಖದು:ಖವತಗೆ ಬಗೆ ನಿರಯದಿ ಹೊರಳ್ಯಾಡುವನ ತಂದುಮಿಗಿಲಾದ ದೇಹವನಿತ್ತೆ ಇನ್ನೆಲೆ ಕೃಷ್ಣ 1

ತಿಳಿದಾದರು ಮಾಡಿ ತಿಳಿಯದಾದರು ಮಾಡಿಹಲವು ದೋಷದ ರಾಶಿ ಒದಗಿಸಿದೆಬಲುತಪ್ಪು ನೋಡದೆ ನಾಮಾಮೃತವನಿತ್ತುಸಲಹುವ ಮನಬಲ್ಲ ಎಲ ಎಲೋ ಮುಕುಂದ 2

ಮಂದಮತಿಯುಗ್ರಾಹ ಅಂಧ ಕೂಪದಿ ಬಿದ್ದುಎಂದಿಗುಭೋಗಭೋಗಿಸಲಾಪೆನೆತಂದೆ ಪ್ರಸನ್ನವೆಂಕಟಪತಿಗೊಲಿದುನಿಂದೆನ್ನ ಛಿದ್ರವನೆಣಿಸುವರೆ ರಂಗ 3
******

No comments:

Post a Comment