Tuesday, 19 November 2019

ಅಂಜರು ಹರಿಭಟರು ದುರಿತಾರಿಗಂಜರು ankita prasannavenkata

ಪ್ರಸನ್ವೆಂಕಟ
ಅಂಜರು ಹರಿಭಟರು ದುರಿತಾರಿಗಂಜರು 
ಹರಿಭಟರುಮಂಜಿನ ದಂಡೋಡಿಪ 
ಮೂಡಣವರಕಂಜಸಖನ ಪೋಲ್ವವರು ಪ.

ಅಗ್ಗಳಿಕೆಯೈಗಣೆಯನ ಬಲದಲಿಮುಗ್ಗದೆ ಕುಲಿಶೆದೆಯಲ್ಲಿ 
ವೈರಾಗ್ಯಾಸ್ತ್ರದಿ ಈರೈದಾಳಾಣ್ಮನಕುಗ್ಗಿಸಿ ಸೆರೆ ತರುವವರು 1

ಮೂರರಾಯುಧ ಹತಿಭಯಜರಿದುವಾರಣನಾಕೆರಡಿರಿದು 
ಶೃಂಗಾರದ ರಾಹುತರೆಂಟರ ಸದೆವರುವೀರಹರಿಧ್ವನಿಯವರು2

ಎರಡೊಂಬತ್ತು ನಾದಿಕಾಭೇರಿಎರಡು ಕಹಳೆಯ ಚೀರಿಸರಕುಮಾಡಿ 
ನವಕಲಿ ಸಂಜಿತರುಹರಿಮಂಡಿತ ನವರಥರು3

ಒಂದೆ ನಿಷ್ಠೆಯ ರಣಧ್ವಜ ಮೇರೆಗೆಹಿಂದಾಗದೆ ಮುಂದಾಗಿಒಂದಿಪ್ಪತ್ತರಿ 
ವ್ಯೂಹ ಕೆಡಹುವರುಕುಂದದ ಧೃತಿ ಮತಿಯವರು 4

ಹಂಗಿನ ಸ್ವರ್ಗವ ಸೂರ್ಯಾಡುವರುಡಂಗುರ ಹೊಯ್ಯುವ 
ಮಹಿಮರುರಂಗ ಪ್ರಸನ್ವೆಂಕಟಪತಿ ಭಟರುಮಂಗಳಪದ ಲಂಪಟರು 5
*********

No comments:

Post a Comment