Wednesday, 6 November 2019

ಅಂಜರು ಹರಿಭಟರು ದುರಿತಾರಿಗಂಜರು ankita prasannavenkata

ಅಂಜರು ಹರಿಭಟರು ದುರಿತಾರಿಗಂಜರು 
ಹರಿಭಟರುಮಂಜಿನ ದಂಡೋಡಿಪ 
ಮೂಡಣವರಕಂಜಸಖನ ಪೋಲ್ವವರು ಪ.

ಅಗ್ಗಳಿಕೆಯೈಗಣೆಯನ ಬಲದಲಿಮುಗ್ಗದೆ 
ಕುಲಿಶೆದೆಯಲ್ಲಿ ವೈರಾಗ್ಯಾಸ್ತ್ರದಿ ಈರೈದಾಳಾಣ್ಮನಕುಗ್ಗಿಸಿ 
ಸೆರೆ ತರುವವರು 1

ಮೂರರಾಯುಧ ಹತಿಭಯಜರಿದುವಾರಣನಾ
ಕೆರಡಿರಿದು ಶೃಂಗಾರದ ರಾಹುತರೆಂಟರ 
ಸದೆವರುವೀರಹರಿಧ್ವನಿಯವರು2

ಎರಡೊಂಬತ್ತು ನಾದಿಕಾಭೇರಿಎರಡು 
ಕಹಳೆಯ ಚೀರಿಸರಕುಮಾಡಿ ನವಕಲಿ 
ಸಂಜಿತರುಹರಿಮಂಡಿತ ನವರಥರು3

ಒಂದೆ ನಿಷ್ಠೆಯ ರಣಧ್ವಜ ಮೇರೆಗೆಹಿಂದಾಗದೆ 
ಮುಂದಾಗಿಒಂದಿಪ್ಪತ್ತರಿ ವ್ಯೂಹ ಕೆಡಹುವರು
ಕುಂದದ ಧೃತಿ ಮತಿಯವರು 4

ಹಂಗಿನ ಸ್ವರ್ಗವ ಸೂರ್ಯಾಡುವರುಡಂಗುರ 
ಹೊಯ್ಯುವ ಮಹಿಮರುರಂಗ ಪ್ರಸನ್ವೆಂಕಟಪತಿ 
ಭಟರುಮಂಗಳಪದ ಲಂಪಟರು 5
*******

No comments:

Post a Comment