Wednesday, 13 November 2019

ನಿನ್ನ ಮಗನ ಮುದ್ದು ನೀನೆ ಲಾಲಿಸಮ್ಮ ankita prasannavenkata

by ಪ್ರಸನ್ನವೆಂಕಟದಾಸರು
ನಿನ್ನ ಮಗನ ಮುದ್ದು ನೀನೆ ಲಾಲಿಸಮ್ಮಚಿನ್ನನೆಂದಾಡಿಸಮ್ಮಬಣ್ಣದ ಬಾಲೇರ 
ಭೋಗಿ ಪ 

ಚದುರತೆಸಣ್ಣವರ ಸರಸೇನಮ್ಮ ಪ.ತಾಳಬೇಕೆಷ್ಟೆಂದು ಗಾಡಿಕಾರನ ಮಾತಹೇಳಲಂಜುವೆವಮ್ಮ ನಮ್ಮಾಳುವ ಇನಿಯರ ವೇಡಿಸಿ ನಮ್ಮ ಲಜ್ಜೆಹಾಳುಮಾಡಿ ಹೋದನೆ 1

ಕೃಷ್ಣ ಸಿಕ್ಕಿದನೆಂದು ನಮ್ಮ ಮಕ್ಕಳ ನಾವೆದಟ್ಟಿಸಿ ಕೊಲುವೆವಮ್ಮ ಈದೃಷ್ಟಿ ಮಾಯದಜಾಲನೋಡೆ ನಂದನರಾಣಿಸೃಷ್ಟೀಶರಿಗೆ ತೀರದು 2

ಕನ್ನೆಯರೊಗ್ಗೂಡಿ ಕಳ್ಳನ ಕೈಕಟ್ಟಿನಿನ್ನೆಡೆಗೆ ತರುತಿದ್ದೆವೆಕಣ್ಣಿಯ ಕೊರಳಿನ ಕರುವೆಂದು ಜನವಾಡೆಖಿನ್ನರಾಗಿ ಹೋದೆವೆ 3

ಆವಾವ ಕೇರೀಲಿಜಾರಚೋರನ ಮಾತುಆವಾವ ಮನೆಗಳಲ್ಲಿಭಾವೆಯರೆಳೆ ಮೊಲೆ ಮೂಗ ಚಿವುಟಿ ಜಾವಜಾವಕಂಜಿಸಿಕೊಂಬನೆ 4

ನಾವು ಮಾಡಿದ ಸುಕೃತವೆಂತೊ ಗೋಪಾಲರೇಯಭಾವಕೆ ಮೆಚ್ಚಿದನೆದೇವರ ದೇವ ಪ್ರಸನ್ವೆಂಕಟೇಶಜೀವಕೆ ಹೊಣೆಯಾದನೆ 5
********

No comments:

Post a Comment