Monday, 18 November 2019

ರಂಗ ಕೊಳಲನೂದಲಾಗಿ ರಂಗಯ್ಯ ಕೊಳಲನೂದಲು ankita prasannavenkata RANGA KOLALANODALAAGI RANGAYYA KOLALANOODALU




ರಂಗ ಕೊಳಲನೂದಲಾಗಿ ರಂಗಯ್ಯ ಕೊಳಲನೂದಲು 
ಮಂಗಳಮಯವಾಯಿತು                                       ।।ಪ।।

ಧರೆಯ ಜನಂಗಳು ಜೀವ ಚೇತನ ಮರೆದು ಶ್ರೀರಂಗ 
ಧ್ಯಾನಪರರಾದರೊ                                             ।।ಅ. ಪ।।

ಬಾಡಿದ ಬಳ್ಳಿ ಮರ ಗೊನೆವಡಿದು 
ತೀಡುವ ಮಂದಮಾರುತನ ಕೂಡಿ ತೂ 
ಗ್ಯಾಡುವ ವನದ ಫಲದಗೊಂಚಲದಿ 
ಪಾಡಲೊಲ್ಲವಳಿಕುಲಗಳು 
ಹೇಡಿಗೊಂಡವು ಜಾಣಕ್ಕಿ ಗಿಣಿಯು ಮಾ 
ತಾಡದೆ ಕಳೆಗುಂದಿದವು ಕೋಗಿಲೆ 
ಓಡ್ಯಾಟ ವೈರಾಟ ಜರಿದು ಖಗಮೃಗ 
ಗಾಢ ನಿದ್ರಾವಶವಾದವೊ                               ।।೧।।

ಕೆಳಗಿನುದಕ ಉಕ್ಕೇರಿ ಬಂದವು 
ತುಳುಕಿ ಚೆಲ್ಲಾಡಿ ನಿಂತಳು ಯಮುನೆ ಮ್ಯಾಲೆ ಮಾ 
ದೊಡ್ಡಿ ಮೇಘಾಳಿ ಬೋರಿಟ್ಟುವು 
ಕಲ್ಲು ಕರಗಿ ನೀರಾದವೋ 
ನಳಿನ ಚಂಪಕ ನಾಗ ಪುನ್ನಾಗ ಪಾ 
ಟಾಲ ಶಾವಂತಿಗಿ ಕೂಡ ಬಕುಳವು 
ಮಾಲತಿ ಜಾಜಿಯು ಪರಿಮಳಂಗೂಡಿ 
ನೀಲಾಂಗನಂಘ್ರಿಗೆ ಎರಗಿದವೋ                         ।।೨।।

ಕೆಚ್ಚಲಾ ಬಿಗಿದು ತೊರೆದ ಮೊಲೆಯ 
ವತ್ಸದೊಡಲಾಸೆ ಜರಿದೆಳೆಹುಲ್ಲು 
ಕಚ್ಚಿ ಅಲ್ಲಿಗಲ್ಲಿ ನಿಂದವು ತಲೆಯ ಮೇಲೆ 
ಪುಚ್ಛವ ನೆಗಹಿ ನೀಂಟಿಸಿ 
ಅಚ್ಯುತಾನಾಕೃತಿ ನೋಡಲು ಸುರರಿ 
ಗಚ್ಚರವಾಯಿತು ಆವು ಕಂಡಾನಂದ 
ಪೆಚ್ಚಿ ಮುಕುಂದನ ಲೇಲಾವಿನೋದಕ್ಕೆ 
ಮೆಚ್ಚಿ ಕುಸುಮವ ಸುರಿದರೊ                          ।।೩।।

ಮುದ್ದುಮೋಹನನ್ನ ಮಂಜುಳ ಸಂಗೀತ 
ಸದ್ದನಾಲಿಸಿ ಗೋಪಾಂಗನೆರೆಲ್ಲರೂ 
ಬುದ್ಧಿ ಸುರ್ಯಾಡಿದರಂಗಜಶರಕೆ 
ಬಿದ್ದು ಪರವಶರಾದರೊ
ಸಿದ್ಧ ಮುನಿಜನರಿದ್ದ ಸಮಾಧಿಯೊಳೆ 
ದ್ದೆದ್ದು ಕುಣಿದರೆದೆ ತಾವರೆಯ 
ಗದ್ದುಗಿಯರಸನೊಲಿಸಿಕೊಂಡರು 
ಗೆದ್ದರೊ ಭವಸಮುದ್ರವ                                ।।೪।।

ಶ್ರೀ ಮನೋಹರಮೂರ್ತಿ ಗೋಪಾಲನು 
ಆ ಮಧುಕುಂಜವನದಿ ತ್ರಿಭಂಗಿಲಿ 
ಹೇಮಾಂಬರುಟ್ಟು ಗೀರುಗಂಧ ಕಸ್ತೂರಿ 
ನಾಮ ಮುಕುಟ ಕುಂಡಲ ಬೆಳಗೀಲಿ 
ದಾಮ ವನಮಾಲೆ ರತುನಾಭರಣ 
ಸ್ವಾಮಿ ಶ್ರೀ ಪ್ರಸನ್ವೆಂಕಟಕೃಷ್ಣನ 
ನಾಮ ಗುಂಡಕ್ರಿಯ ಮೇಘರಾಗವ ಮಾಡೆ 
ಸಾಮಗಾಯನದಿ ನಮೋ ಎಂದರು                     ।।೫।।
***

ರಾಗ : ನೀಲಾಂಬರಿ ತಾಳ : ಅಟ್ಟ (raga tala may differ in audio)
ರಾಗ: ಆರಭಿ. ಏಕ ತಾಳ.

Ranga kolalanudalagi rangayya kolalanudalu
Mangalamayavayitu ||pa||

Dhareya janangalu jiva cetana maredu sriranga
Dhyanapararadaro ||a. Pa||

Badida balli mara gonevadidu
Tiduva mandamarutana kudi tu
Gyaduva vanada Paladagonchaladi
Padalollavalikulagalu
Hedigondavu janakki giniyu ma
Tadade kalegundidavu kogile
Odyata vairata jaridu kagamruga
Gadha nidravasavadavo ||1||

Kelaginudaka ukkeri bandavu
Tuluki celladi nintalu yamune myale ma
Doddi megali borittuvu
Kallu karagi niradavo
Nalina champaka naga punnaga pa
Tala savantigi kuda bakulavu
Malati jajiyu parimalangudi
Nilamganangrige eragidavo ||2||

Keccala bigidu toreda moleya
Vatsadodalase jaridelehullu
Kacci alligalli nindavu taleya mele
Puccava negahi nintisi
Acyutanakruti nodalu surari
Gaccaravayitu Avu kandananda
Pecci mukundana lelavinodakke
Mecci kusumava suridaro ||3||

Muddumohananna manjula sangita
Saddanalisi gopanganerellaru
Buddhi suryadidarangajasarake
Biddu paravasaradaro
Siddha munijanaridda samadhiyole
Ddeddu kunidarede tavareya
Gaddugiyarasanolisikondaru
Geddaro Bavasamudrava ||4||

Sri manoharamurti gopalanu
A madhukunjavanadi tribangili
Hemambaruttu girugandha kasturi
Nama mukuta kundala belagili
Dama vanamale ratunabarana
Svami sri prasanvenkatakrushnana
Nama gundakriya megaragava made
Samagayanadi namo endaru ||5||
***

pallavi

ranga koLalanUdalAgi mangaLamayavAitu dhare jagangaLu caitanya maredu anga paravashavAduvu

caraNam 1

tIDida mAruta mandagati geida pADida alaru bala goncalu biDE pADalollavaLi kulagaLu pADida mAmara cigurOdeya
hEDi koNDavu jANvakki giLI mAtADade kaLe kundiduvu kOgile OdaTa vairATa biTTu khaga mrga kATha nidrA vashavAduvu

caraNam 2

taLadudaka ukkEri banduvu tuLuki cellADi nindaLE yamune mEle mElODi mEghALi dhARiTTuvu kallu karagi nIrAduvu
naLina campaka nAga punnAga pATala shAvantige kunda bakuLavu mAlati jAji parimaLa kUDitu nIlAngananghrikeragidavu

caraNam 3

muddu mOhanana manjuLa sangIta saddanAlaisi gOpAnganeyarella buddhi sUrADi Ananda vAridhiyalli biddu paravasharAdaru
siddha munijanaridda samAdhiyoLeddu kuNidaru eduredurAgi kaddugeya rasanOlaisi koNDaru geddaru bhava samudrava

caraNam 4

keccalu bigidu toreyalu moleyu vatsagaLoDalAseyu toredeLahulla kaccirallalli ninduvu gOvgaLu pucchava negahi nINtisi
acyutanAkrti nODalu surarige AscaryavAyitu nAvu kaNDevendu mecci mukundana lIlAvinOdake heccina kusumava suridaru

caraNam 5

shrI manOhara gOpAla mUruti A madhukunja vanadi tribhangili hEmAmbaravuTTu gIrgandha kastUri nAma makuTada beLaginali
dhAma vanamAle bahirbhUSita svAmi purandara viTTala (?) rAyanu  nAmakriya mEgharanjani pADe sAmavEda namO namO enne
***


ರಂಗ ಕೊಳಲನೂದಲಾಗಿ ಮಂಗಳಮಯವಾಯಿತು ಧರೆ
ಜಗಂಗಳು ಚೈತನ್ಯ ಮರೆದು ಅಂಗ ಪರವಶವಾದುವು ಪಲ್ಲವಿ

ತೀಡಿದ ಮಾರುತ ಮಂದಗತಿಗೈದ ಪಾಡಿದ ಅಲರು ಬಲ ಗೊಂಚಲು ಬಿಡೆ
ಪಾಡಲೊಲ್ಲವಳಿ ಕುಲಗಳು ಪಾಡಿದ ಮಾಮರ ಚಿಗುರೊಡೆಯದು
ಹೇಡಿ ಕೊಂಡವು ಜಾಣ್ವಕ್ಕಿ ಗಿಳೀ ಮಾತಾಡದೆ ಕಳೆ ಕುಂದಿದುವು ಕೋಗಿಲೆ
ಓಡಾಟ ವೈರಾಟ ಬಿಟ್ಟು ಖಗ ಮೃಗ ಕಾಠ ನಿದ್ರಾ ವಶವಾದುವು 1

ತಳದುದಕ ಉಕ್ಕೇರಿ ಬಂದುವು ತುಳುಕಿ ಚೆಲ್ಲಾಡಿ ನಿಂದಳೇ ಯಮುನೆ
ಮೇಲೆ ಮೇಲೋಡಿ ಮೇಘಾಳಿ ಧಾರಿಟ್ಟುವು ಕಲ್ಲು ಕರಗಿ ನೀರಾದುವು
ನಳಿನ ಚಂಪಕ ನಾಗ ಪುನ್ನಾಗ ಪಾಟಲ ಶಾವಂತಿಗೆ ಕುಂದ ಬಕುಳವು
ಮಾಲತಿ ಜಾಜಿ ಪರಿಮಳ ಕೂಡಿತು ನೀಲಾಂಗನಂಘ್ರಿಗೆರಗಿದವು 2

ಮುದ್ದು ಮೋಹನನ ಮಂಜುಳ ಸಂಗೀತ ಸದ್ದನಾಲಿಸಿ ಗೋಪಾಂಗನೆಯರೆಲ್ಲ
ಬುದ್ಧಿ ಸೂರಾಡಿ ಆನಂದ ವಾರಿಧಿಯಲ್ಲಿ ಬಿದ್ದು ಪರವಶರಾದರು
ಸಿದ್ಧ ಮುನಿಜನರಿದ್ದ ಸಮಾಧಿಯೊಳೆದ್ದು ಕುಣಿದರು ಎದುರೆದುರಾಗಿ
ಕದ್ದುಗೆಯ ರಸನೋಲೈಸಿ ಕೊಂಡರು ಗೆದ್ದರು ಭವ ಸಮುದ್ರವ 3

ಕೆಚ್ಚಲು ಬಿಗಿದು ತೊರೆಯಲು ಮೊಲೆಯು ವತ್ಸಗಳೊಡಲಾಸೆಯು ತೊರೆದೆಳೆಹುಲ್ಲ
ಕಚ್ಚಿರಲ್ಲಲ್ಲಿ ನಿಂದುವು ಗೋವ್ಗಳು ಪುಚ್ಛವ ನೆಗಹಿ ನೀಂಟಿಸಿ
ಅಚ್ಯುತನಾಕೃತಿ ನೋಡಲು ಸುರರಿಗೆ ಆಶ್ಚರ್ಯವಾಯಿತು ನಾವು ಕಂಡೆವೆಂದು
ಮೆಚ್ಚಿ ಮುಕುಂದನ ಲೀಲಾವಿನೋದಕೆ ಹೆಚ್ಚಿನ ಕುಸುಮವ ಸುರಿದರು 4

ಶ್ರೀ ಮನೋಹರ ಗೋಪಾಲ ಮೂರುತಿ ಆ ಮಧುಕುಂಜ ವನದಿ ತ್ರಿಭಂಗಿಲಿ
ಹೇಮಾಂಬರವುಟ್ಟು ಸುಗಂಧ ಕಸ್ತೂರಿ ನಾಮ ಮಕುಟದ ಬೆಳಗಿನಲಿ
ಧಾಮ ವನಮಾಲೆ ಬಹಿರ್ಭೂಶಿತ ಸ್ವಾಮಿ ಪುರಂದರ ವಿಟ್ಠಲರಾಯನು
ರಾಮಕ್ರಿಯ ಮೇಘರಂಜನಿ ಪಾಡೆ ಸಾಮವೇದ ನಮೋ ನಮೋ ಎನ್ನೆ 5
***

ರಂಗ ಕೊಳಲನೂದಲಾಗ |ಮಂಗಳಮಯವಾಯ್ತು ಧರೆ-ಜ -ಪ

ನಂಗಳು ಚೈತನ್ಯ ಮರೆದು |ರಂಗಧ್ಯಾನಪರರಾದರು ಅ.ಪ

ಬಾಡಿದ ಮಾಮರಗಳು ಗೊನೆಯೊಡೆದವು |ತೀಡುತ ಮಾರುತ ಮಂದಗತಿಗೊಯ್ಯೆ ||ಬಾಡಿದ ಬರಲು ಫಲದ ಗೊಂಚಲು |ಪಾಡಲೊಲ್ಲವಳಿಕುಲಗಳು ||ಹೇಡಿಗೊಂಡವು ಜಕ್ಕವಕ್ಕಿ ಗಿಳಿ ಮಾ-|ತಾಡದೆ ಕಳೆಗುಂದಿದವು ಕೋಗಿಲೆ ||ಓಡಾಟ ವೈರಾಟ ಬಿಟ್ಟು ಖಗಮೃಗ |ಗಾಢ ನಿದ್ರಾವಶವಾದವು 1

ಕೆಳಗಿನುದಕ ಉಬ್ಬೇರಿ ಬಂದುವು |ತುಳುಕಿ ಚೆಲ್ಲಾಡಿ ನಿಂದಳು ಯಮುನೆ ||ಮಳೆಯ ಮೋಡೊಡ್ಡಿ ಮೇಘಾಳಿ ಧಾರಿಟ್ಟುವು |ಕಲುಕರಗಿ ಕರಗಿ ನೀರಾದುವು ||ನಳಿನಚಂಪಕನಾಗಪುನ್ನಾಗಪಾ-|ಟಲ ಸೇವಂತಿಗೆ ಕುಂದ-ಮೊಲ್ಲೆ ಮಲ್ಲಿಗೆ ಬ-||ಕುಲ ಮಾಲತಿ ಜಾಜಿ ಪರಿಮಳಗೂಡಿ |ನೀಲಾಂಗನಂಘ್ರಿಗೆ ನೆರೆದುವು 2

ಕೆಚ್ಚಲು ಬಿಗಿದು ತೊರೆದ ಮೊಲೆಯೊಳು |ವತ್ಸದೊಡಲಾಸೆಜರಿದುಎಳೆಹಲ್ಲ||ಕಚ್ಚದಲ್ಲಿಗಲ್ಲಿ ನಿಂದುವು ತಮ್ಮಯ |ಪುಚ್ಚವ ನೆಗಹಿ ನೀಂಟಿಸಿ ||ಅಚ್ಯುತನಾಕೃತಿ ನೋಡಲು ಸುರರಿಗೆ |ಅಚ್ಚರಿಯಾಯಿತು ಆವು ಕಂಡಾನಂದ ||ಪೆಚ್ಚಿ ಮುಕುಂದನ ಲೀಲಾವಿನೋದಕೆ |ಮೆಚ್ಚಿ ಕುಸುಮವ ಸುರಿದರು 3

ಮುದ್ದು ಮೋಹನನ ಮಂಜುಳ ಸಂಗೀತ |ಸದ್ದನಾಲಿಸಿ ಗೋಪಾಂಗನೆಯರೆಲ್ಲ ||ಬುದ್ಧಿ ಸೂರಾಡಿ ತಮ್ಮಾಲಯವನೆ ಬಿಟ್ಟು |ಎದ್ದು ಪರವಶರಾದರು ||ಸಿದ್ದ ಮುನಿಜನರಿದ್ದ ಸಮಾಧಿಯಿಂ-|ದೆದ್ದೆದ್ದು ಕುಣಿದೆದ್ದರು ಎದುರಾಗಿ ||ಗದ್ದುಗೆಯರಸನ ಒಲಿಸಿಕೊಂಡರು |ಗೆದ್ದರು ಭವದ ಸಮುದ್ರವನು 4

ಶ್ರೀಮನೋಹರ ಗೋಪಾಲ ಮೂರುತಿ |ಆ ಮಧು ಕುಂಜ ವನದಿ ತ್ರಿಭಂಗಿಯಲಿ ||ಹೇಮಾಂಬರವುಟ್ಟು ಗೀರುಗಂಧ ಕಸ್ತೂರಿ |ನಾಮ ಮುಕುಟದ ಬೆಳಕಿನಲಿ ||ದಾಮವನಮಾಲೆ ಶ್ರೀವತ್ಸಕೌಸ್ತುಭ|ಸ್ವಾಮಿ ಪುರಂದರವಿಠಲರಾಯನ |ರಾಮಶ್ರಿ-ಗುಂಡಶ್ರಿ ಮೇಘರಂಜನೆ ಪಾಡಿ |ಸಾಮಗಾನಪ್ರಿಯ ನಮೊ ಎಂದರು 5
***

No comments:

Post a Comment